Breaking News

ಮನೆಯ ಮುಂದೆ ಕಾರು ನಿಲ್ಲಿಸಿದ್ದ ಕಾರಿಗೆ ಒಂದೇ ದಿನ ಐದು ಟೋಲ್‌ಗ‌ಳಲ್ಲಿ ಫಾಸ್ಟಾಗ್‌ ಮೂಲಕ ಟೋಲ್‌ ಶುಲ್ಕ ಕಡಿತಗೊಂಡಿರುವ ಕುತೂಹಲದ ಸಂಗತಿ

Spread the love

ದಾವಣಗೆರೆ: ಮನೆಯ ಮುಂದೆ ಕಾರು ನಿಲ್ಲಿಸಿದ್ದ ಕಾರಿಗೆ ಒಂದೇ ದಿನ ಐದು ಟೋಲ್‌ಗ‌ಳಲ್ಲಿ ಫಾಸ್ಟಾಗ್‌ ಮೂಲಕ ಟೋಲ್‌ ಶುಲ್ಕ ಕಡಿತಗೊಂಡಿರುವ ಕುತೂಹಲದ ಸಂಗತಿ ವರದಿಯಾಗಿದೆ.

ಒಟ್ಟಾರೆ ಏಳು ಬಾರಿ ವಿವಿಧ ಟೋಲ್‌ಗ‌ಳಲ್ಲಿ ಶುಲ್ಕ ಕಡಿತಗೊಂಡಿದೆ. ಹಾಗಾಗಿ ಕಾರಿನ ಮಾಲಕರು ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ದಾವಣಗೆರೆ ಸಮೀಪದ ಆವರಗೆರೆ ನಿವಾಸಿ, ನ್ಯಾಯವಾದಿ ಎಸ್‌. ಪರಮೇಶ್‌ ಎಂಬವರ ಇನ್ನೋವಾ ಕಾರು (ಕೆಎ-17, ಎನ್‌-6828) ಮನೆಯ ಮುಂದೆಯೇ ನಿಂತಿತ್ತು. ಆದರೂ ಮಾ.31ರ ರಾತ್ರಿ ದಾವಣಗೆರೆ ತಾಲೂಕಿನ ಹೆಬ್ಟಾಳು, ಚಿತ್ರದುರ್ಗದ ಗುಯಿಲಾಳ್‌, ಬೆಂಗಳೂರು ಸಮೀಪದ ಕಲುಮಹಳ್ಳಿ, ನವಯುಗ್‌, ಕರ್ಜಿವನ್‌ ಹಾಗೂ ಮಾ.25ರಂದು ಬೇರೆ ಎರಡು ಟೋಲ್‌ಗ‌ಳಲ್ಲಿ ಫಾಸ್ಟಾಗ್‌ ಮೂಲಕ ಶುಲ್ಕ ಕಡಿತವಾಗಿರುವ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ಬಂದಿದೆ.

ಈ ಕುರಿತು ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ಜತೆಗೆ ಪ್ರತಿ ಟೋಲ್‌ನಿಂದ 5 ಲ. ರೂ. ಪರಿಹಾರ ಕೋರಿ ಗ್ರಾಹಕ ನ್ಯಾಯಾಲಯಕ್ಕೂ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ