ಬೆಳಗಾವಿ/ರಾಯಚೂರು: ಲೋಕಸಭಾ ಚುನಾವಣೆಗೆ ಬೆಳಗಾವಿ ಕಾಂಗ್ರೆಸ್ಸಿನಲ್ಲಿ ಈಗ ಒಗ್ಗಟ್ಟಿನ ಪ್ರದರ್ಶನ ಆಗ್ತಿದೆ.
ಕಳೆದ ಬಾರಿ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ವೈಮನಸ್ಸು ಹೊಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಕೆಲ ಹೊತ್ತು ಸಮಾಲೋಚನೆ ಮಾಡಿದ್ದಾರೆ. ಬಳಿಕ ಸತೀಶ್ ಜಾರಕಿಹೊಳಿ ಪರ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ರು.
ಪ್ರಚಾರ ಭಾಷಣದ ವೇಳೆಯೂ ಸತೀಶ್ ಜಾರಕಿಹೊಳಿಯರನ್ನೂ ಸೂಕ್ತ ಅಭ್ಯರ್ಥಿ ಎಂದು ಹಾಡಿ ಹೊಗಳಿದ್ದಾರೆ. ಸತೀಶ್ ಜಾರಕಹೊಳಿ ಮಾತನಾಡಿ, ಇದು ಕಾರ್ಯಕರ್ತರು ಮಾಡುವ ಚುನಾವಣೆ, ಕೇಂದ್ರ ಸರ್ಕಾರದ 7 ವರ್ಷದ ವೈಫಲ್ಯವನ್ನ ಜನರೇ ಹೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ಇತ್ತ ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಸಚಿವ ಶ್ರೀರಾಮುಲು ಮೀಸಲಾತಿ ನೀಡುವ ಕುರಿತ ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆ. ನಾನೇ ಸಮಾಜ ಕಲ್ಯಾಣ ಸಚಿವನಾಗಿದ್ದೇನೆ. ಪರಿಶಿಷ್ಟ ಜಾತಿಯವರಿಗೆ ಶೇ.17, ಪರಿಶಿಷ್ಟ ವರ್ಗಕ್ಕೆ ಶೇ 7.5, ಮೀಸಲಾತಿ, ಲಿಂಗಾಯತರನ್ನ 2 ಎಗೆ, ಕುರುಬರನ್ನ ಎಸ್‍ಟಿಗೆ ಸೇರಿಸುವ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಒಂದು ಲೋಕಸಭೆ, ಎರಡು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವು ನಿಶ್ಚಿತ ಅಂದ್ರು.