ಬೆಂಗಳೂರು: ಸಿಡಿ ರಾಡಿ ಎಪಿಸೋಡ್ ಮುಂದುವರಿದಿದೆ. ಸಿಡಿ ಯುವತಿಗೆ ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ಮುಕ್ತ ಅನ್ನೋ ಮೆಡಿಕಲ್ ಟೀಂ 3 ಗಂಟೆಗಳ ಕಾಲ ತಪಾಸಣೆ ನಡೆಸ್ತು. ಅತ್ಯಾಚಾರ, ಹಲ್ಲೆ, ದೇಹದ ಪರಿಶೀಲನೆ, ಮಾಸಿಕ ಖಿನ್ನತೆ ಸೇರಿದಂತೆ ಬೇರೆ ಖಾಯಿಲೆ ಬಗ್ಗೆ ಪರಿಶೀಲನೆ ಮಾಡಲಾಯಿತು. ಈ ಮುಕ್ತ ತಂಡದಲ್ಲಿ ಸ್ತ್ರೀ ರೋಗ ತಜೆ, ತುರ್ತ ಚಿಕಿತ್ಸಾ ವಿಭಾಗ ವೈದ್ಯರು, ಮಾನಸಿಕ ರೋಗ ತಜ್ಞರು ಮತ್ತು ಮೆಡಿಸನ್ ವಿಭಾಗದ ವೈದ್ಯರು, ದಾದಿಯರು ಇದ್ದರು.
ಕೌನ್ಸಿಂಗ್ ಮಾಡುವುದಕ್ಕೂ ಯುವತಿಯಿಂದ 3 ಫಾರಂಗಳಿಗೆ ಸಹಿ ಮಾಡಿಕೊಳ್ಳಲಾಯ್ತು. ಕೊರೊನಾ ಆಂಟಿಜೆನ್ ಟೆಸ್ಟ್‍ನಲ್ಲಿ ಯುವತಿಗೆ ನೆಗೆಟಿವ್ ಬಂದಿದೆ. ಯುವತಿಗೆ ಆಸ್ಪತ್ರೆ ಒಳಗೆ ಟೆಸ್ಟ್ ನಡೀತಿದ್ರೆ.. ಆಸ್ಪತ್ರೆ ಹೊರಗಡೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಟೆಸ್ಟ್ ಬಳಿಕ ಆಕೆಯನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗ್ತಾರಾ ಅನ್ನೋ ಚರ್ಚೆ ಎದ್ದಿತ್ತು. ಆದರೆ ಪೊಲೀಸರು ನೇರವಾಗಿ ಆಡುಗೋಡಿಯ ಟೆಕ್ನಿಕಲ್ ಸೆಲ್‍ಗೆ ಕರೆದುಕೊಂಡು ಹೋಗಲಾಯಿತು.
ಈ ವೇಳೆ ಧ್ವನಿ ಪರೀಕ್ಷೆಗೆ ಒಳಪಡಿಲಾಯಿತು. ಆಗ ಕೂಡ ಸಂತ್ರಸ್ತೆ ನನಗೆ ನಂಬಿಕೆ ದ್ರೋಹವಾಯ್ತು ಅಂದಿದ್ದಾರೆ. ನಾಳೆ ಸ್ಥಳ ಮಹಜರು ನಡೆಸುವ ಬಗ್ಗೆ ಎಸ್‍ಐಟಿ ನೊಟೀಸ್ ಕೊಟ್ಟಿದೆ. ಈ ಮಧ್ಯೆ, ಸಂತ್ರಸ್ತೆ ಪರ ವಕೀಲ ಜಗದೀಶ್ ಮಾತನಾಡಿ, ಮೆಡಿಕಲ್ ಟೆಸ್ಟ್ ಆಗಿದೆ. ಈಗ ವಾಯ್ಸ್ ಟೆಸ್ಟ್ ಆಗಲಿದೆ. ಇದು ಕಬ್ಬನ್ ಪಾರ್ಕ್ ಠಾಣೆಯ ಪ್ರಕರಣ ಸಂಬಂಧ ಮಾತ್ರ ಆಗ್ತಿದೆ. ಬೇರೆ ಪ್ರಕರಣಗಳ ತನಿಖೆ ಬಗ್ಗೆ ಮಾಹಿತಿ ಇಲ್ಲ ಅಂದ್ರು. ಅಲ್ಲದೆ ಸದಾಶಿವನಗರ ಕೇಸಲ್ಲಿ ದೂರುದಾರ ನಮ್ಮ ಸಂತ್ರಸ್ತೆ ಹೆಸರು ದಾಖಲಿಸಿಲ್ಲ ಅಂದ್ರು.