ಚಿಕ್ಕಬಳ್ಳಾಪುರ: ಸಂತ್ರಸ್ತೆ ಎನ್ನಲಾದ ಹುಡುಗಿ ಕನ್ಫ್ಯೂಸ್ ನಲ್ಲಿದ್ದಾಳೆ. ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾಳೆ. ಆಕೆಗೆ ಮೊದಲು ಮೆಂಟ್ಲ ಟೆಸ್ಟ್ ಮಾಡಿಸಬೇಕಿದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆಡ ಮಾತನಾಡಿದ ಅವರು ಯುವತಿ, ನ್ಯಾಯಾಧೀಶರ ಮುಂದೆ ಹಾಜರಾಗಿ ಏನು ಹೇಳಿದ್ದಾಳೆಂಬುದು ಯಾರಿಗೂ ಗೊತ್ತಿಲ್ಲ. ಹೆಣ್ಣುಮಗಳ ಹೇಳಿಕೆ ಏನೆಂಬುದು ಈಗಲೂ ಬಹಿರಂಗವಾಗಿಲ್ಲ. ಆ ಹೆಣ್ಣು ಮಗಳು ಕನ್ಫ್ಯೂಸ್ ನಲ್ಲಿದ್ದಾಳೆ. ಒಂದೊಂದು ದಿನ ಒಂದೊಂದು ತರ ಹೇಳಿಕೆ ಕೊಡ್ತಿದ್ದಾಳೆ. ಹಾಗಾಗಿ ಆಕೆಗೆ ಕೂಲ್ ಆಗಿ ಮೆಂಟಲ್ ಚೆಕ್ ಅಪ್ ಮಾಡಿಸಬೇಕಿದೆ. ಆಗ ಸತ್ಯಾಂಶ ಹೊರ ಬಂದರೂ ಬರಬಹುದು ಎಂದು ನಾರಾಯಣ ಗೌಡ ಹೇಳಿದ್ದಾರೆ
Laxmi News 24×7