ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ 16 ರಾಜ್ಯಗಳ ವಿದ್ಯುತ್ ಸಂಪರ್ಕವನ್ನೇ ಕಟ್ ಮಾಡ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನದಲ್ಲಿ ನಡೆಯುತ್ತಿದ್ದ ಮಹಾಪಂಚಾಯತ್ನಲ್ಲಿ ಪಾಲ್ಗೊಳ್ಳಲು ತೆರಳುವ ವೇಳೆ ರಾಕೇಶ್ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ.
ಮುಂದುವರೆದು ಕೇಂದ್ರದಲ್ಲಿ ಸರ್ಕಾರವೇ ಇಲ್ಲ. ವ್ಯಾಪಾರಿಗಳು ದೇಶವನ್ನ ಆಳುತ್ತಿದ್ದಾರೆ. ಅವರು ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿದ್ದಾರೆ. ದೇಶದ ಜನರು ಅವರನ್ನ ಸರ್ಕಾರದಿಂದ ಹೊರಗೆ ಹಾಕಬೇಕಿದೆ ಎಂದಿದ್ದಾರೆ. ಅಲ್ಲದೇ ಪಾರ್ಲಿಮೆಂಟ್ ಮತ್ತು ಅಸ್ಸೆಂಬ್ಲಿಯಲ್ಲಿ ಪೂರ್ತಿ ಮೆಜಾರಿಟಿ ಪಡೆದ ಯಾವುದೇ ಪಾರ್ಟಿ ಸರ್ವಾಧಿಕಾರಿಯಾಗುತ್ತದೆ. ಜನರು ಹಸಿವು ಮತ್ತು ನಿರುದ್ಯೋಗವನ್ನು ಎದುರಿಸುತ್ತಿದ್ರೆ ಇತ್ತ ಕೇಂದ್ರ ಸರ್ಕಾರ ರೈತರ ಭೂಮಿಯನ್ನು ಮಾರಾಟ ಮಾಡುತ್ತಿದೆ.
ರೈತರ ಪ್ರತಿಭಟನೆ ಐದರಿಂದ ಆರು ತಿಂಗಳವರೆಗೆ ಮುಂದುವರೆಯುವ ಸಾಧ್ಯತೆಗಳಿವೆ. ವಿರೋಧ ಪಕ್ಷ ಇರದೇ ಇರುವುದು ಪ್ರಜಾಪ್ರಭುತ್ವಕ್ಕೆ ದುರದೃಷ್ಟಕರ. ವಿರೋಧ ಪಕ್ಷ ಪಾರ್ಲಿಮೆಂಟ್ನಲ್ಲಿ ಇದ್ದಿದ್ದರೆ ರಸ್ತೆಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಪಾರ್ಲಿಮೆಂಟ್ನಲ್ಲಿ ನಡೆಯುತ್ತಿತ್ತು ಎಂದು ಹೇಳಿದ್ದಾರೆ.
Laxmi News 24×7