Breaking News

ನನ್ನ ಜೇಬಲ್ಲಿ ಬಾಂಬ್‌ ಇದೆ. ತಡ್ಕೊಳಿ. ಸದ್ಯ ಗಪ್‌ಚುಪ್‌ ಇದ್ದೇನೆ. ಹೊರಹಾಕಿದ್ರೆ ಅಷ್ಟೇ.

Spread the love

ಬೆಂಗಳೂರು, ಮಾರ್ಚ್ 25; “ನನ್ನ ಜೇಬಿನಲ್ಲೊಂದು ಬಾಂಬ್ ಇದೆ. ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ಯ ನಡೆದಿರುವುದು ಈಗ ಖಚಿತವಾಗಿದೆ” ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ದೂರು ಕೊಟ್ಟ ಅರ್ಧ ಗಂಟೆಯಲ್ಲಿ ವಿಡಿಯೋ ಬಿಡುಗಡೆ ಆಗುತ್ತದೆ. ಇದು ಎಷ್ಟು ದೊಡ್ಡ ಷಡ್ಯಂತ್ಯ ಎಂಬುದು ಈಗ ತಿಳಿಯುತ್ತಿದೆ” ಎಂದರು.

 

“ಇನ್ನೂ 10 ಸಿಡಿ ಬರಲಿ ಎದುರಿಸಲು ನಾನು ಸಿದ್ಧವಾಗಿದ್ದೇನೆ. ನನ್ನ ವಿರುದ್ಧ ಷಡ್ಯಂತ್ರ ನಡೆದಿರುವುದು ಸ್ಪಷ್ಟವಾಗಿದೆ. ನಾನು ಆರೋಪ ಮುಕ್ತನಾಗುವ ವಿಶ್ವಾಸವಿದೆ. ದೇವರ ಆಶೀರ್ವಾದದಿಂದ ನಾನು ಇದರಿಂದ ಮುಕ್ತನಾಗುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

“ನನ್ನ ಜೇಬಿನಲ್ಲೊಂದು ಬಾಂಬ್ ಇದೆ. ಆ ಬಾಂಬ್ ಬಿಟ್ಟರೆ ನಿವೇ ಶಾಕ್ ಆಗುತ್ತೀರಿ. ಶಾಕ್ ಆಗುವಂತಹ ಅನೇಕ ವಿಚಾರಗಳು ನನ್ನ ಬಳಿ ಇವೆ. ತಪ್ಪು ಮಾಡಿದವರನ್ನು ಜೈಲಿನಲ್ಲಿ ಕೂರಿಸದೇ ಬಿಡುವುದಿಲ್ಲ” ಎಂದು ತಿಳಿಸಿದರು.

ಗುರುವಾರ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. 2ನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದಾಳೆ. “ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿಕೆ ನೀಡಿದ್ದು, ತಂದೆ-ತಾಯಿಯ ರಕ್ಷಣೆ ನನಗೆ ಮುಖ್ಯ” ಎಂದು ಹೇಳಿದ್ದಾಳೆ.

2ನೇ ವಿಡಿಯೋದಲ್ಲಿ ಎಸ್‌ಐಟಿ ವಿರುದ್ಧ ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನನ್ನ ತಂದೆ ತಾಯಿಗೆ ರಕ್ಷಣೆ ಕೊಡಬೇಕು ಎಂದು ವಿಪಕ್ಷ ನಾಯಕರು, ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾಳೆ. ಈ ವಿಡಿಯೋ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ರಮೇಶ್ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.


Spread the love

About Laxminews 24x7

Check Also

ಸಿಲಿಂಡರ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಆಕ್ರೋಶ – ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆ

Spread the loveಬೆಂಗಳೂರು: ಸಿಲಿಂಡರ್ ದರ ಹೆಚ್ಚಳಕ್ಕೆ  ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಕೆಪಿಸಿಸಿ ಕಚೇರಿ ಮುಂದೆ ಕೇಂದ್ರ ಸರ್ಕಾರದ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ