ಬೆಂಗಳೂರು, :- ಅಬಕಾರಿ ಇಲಾಖೆಯಲ್ಲಿ ನಿಯಮ ಬಾಹಿರವಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ-68ರನ್ವಯ ಜ್ಯೇಷ್ಠತೆಯಲ್ಲಿ ಹಿರಿಯರನ್ನು ಕಡೆಗಣಿಸಿ ಕಿರಿಯ ಅಬಕಾರಿ ಅಧೀಕ್ಷಕರಿಗೆ ಅಬಕಾರಿ ಉಪ ಆಯುಕ್ತರ ಹುದ್ದೆಗೆ ಹೆಚ್ಚುವರಿ ಪ್ರಭಾರಿ ಹುದ್ದೆಗಳನ್ನು ಈ ಹಿಂದೆ ನೀಡಲಾಗಿದೆ.
ಶಿವಮೊಗ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಈಗಾಗಲೇ ಉಪ ಆಯುಕ್ತರು ಹಾಗೂ ಹಿರಿಯ ಅಧೀಕ್ಷಕರು ಇದ್ದರೂ ಕೂಡ ಅತ್ಯಂತ ಕಿರಿಯ ಅಬಕಾರಿ ಅಧೀಕ್ಷಕರಾಗಿದ್ದ ಮೋತಿಲಾಲ್ ಮತ್ತು ಅಜಿತ್‍ರನ್ನು ಈಗಾಗಲೇ ಹೆಚ್ಚುವರಿ ಪ್ರಭಾರಿಯಾಗಿ ಉಪ ಆಯುಕ್ತರನ್ನಾಗಿ ನೇಮಕ ಮಾಡುವ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ತದನಂತರ ಎಚ್ಚೆತ್ತುಕೊಂಡ ಸಚಿವ ನಾಗೇಶ್ ಖಾಲಿ ಇದ್ದ ಅಬಕಾರಿ ಉಪ ಆಯುಕ್ತರ ಹುದ್ದೆಗೆ 8 ಜನ ಹಿರಿಯ ಅಧೀಕ್ಷಕರಿಗೆ ಹೆಚ್ಚುವರಿ ಪ್ರಭಾರಿಯಾಗಿ ಅಬಕಾರಿ ಉಪ ಆಯುಕ್ತರ ಸ್ಥಾನಕ್ಕೆ ಭರ್ತಿ ಮಾಡಲಾಗಿದೆ.
ಅದರಂತಯೇ ಪ್ರಸ್ತುತ ಜುಲೈ ಅಂತ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಅಬಕಾರಿ ಉಪ ಆಯುಕ್ತರ ಸ್ಥಾನ ನಿವೃತ್ತಿಯಿಂದ ಈ ಸ್ಥಾನ ಕೂಡ ಸದ್ಯ ಖಾಲಿ ಆಗಲಿದೆ.ಇದರಿಂದಾಗಿ ಈ ಬಾರಿಯಾದರೂ ಹಿರಿಯ ಅಧೀಕ್ಷಕರನ್ನು ಪರಿಗಣಿಸಿ ಅಬಕಾರಿ ಉಪ ಆಯುಕ್ತರ ಸ್ಥಾನಕ್ಕೆ ಪರಿಗಣಿಸಿ ಎಂದು ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳು ಹಾಗೂ ಸಾಮಾಜಿಕ ಹೋರಾಟಗಾರರು ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು, ಅಬಕಾರಿ ಇಲಾಖೆಯ ಸಚಿವರು ಹಾಗೂ ಅಬಕಾರಿ ಆಯುಕ್ತರಿಗೆ ಪತ್ರಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.