ಪ್ಯಾನ್ ಕಾರ್ಡ್ ಹೊಂದಿರುವವರು ಇದನ್ನ ಎಚ್ಚರಿಕೆಯಿಂದ ಓದಿ. ಯಾಕಂದ್ರೆ, ಆದಾಯ ತೆರಿಗೆ ಇಲಾಖೆಯು 2021ರ ಮಾರ್ಚ್ 31ಕ್ಕೆ ಆಧಾರ್ ಪ್ಯಾನ್ ಲಿಂಕ್ ಗಡುವು ನೀಡಿದೆ. ಒಂದ್ವೇಳೆ ನಿಮ್ಮ ಪ್ಯಾನ್ʼನ್ನ ನಿಮ್ಮ ಆಧಾರ್ʼಗೆ ಲಿಂಕ್ ಮಾಡದಿದ್ದರೆ, ಏಪ್ರಿಲ್ 1 ರಿಂದ ನೀವು ಯಾವುದೇ ಹಣಕಾಸು ವ್ಯವಹಾರವನ್ನ ಮಾಡೋಕೆ ಸಾಧ್ಯವಾಗೋಲ್ಲ.
ಪ್ಯಾನ್‌ಗೆ ಆಧಾರ್ ಲಿಂಕ್ ಮಾಡದಿದ್ರೆ, ಆದಾಯ ತೆರಿಗೆ ಕಾಯ್ದೆಯಡಿ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಹೇಳಿದೆ. ಅಂದ್ರೆ, ಅಂತಹ ಪ್ಯಾನ್ ಹೊಂದಿರೋರನ್ನ ಪಾನ್ ಕಾರ್ಡ್ ರಹಿತರೆಂದು ಪರಿಗಣಿಸಲಾಗುವುದು. ಮಾತ್ರವಲ್ಲದೇ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಅಡಿಯಲ್ಲಿ 10 ಸಾವಿರ ರೂ.ದಂಡವನ್ನೂ ವಿಧಿಸ್ಬೋದು.
ಉದಾಹರಣೆಗೆ, ನೀವು ಬ್ಯಾಂಕ್ʼಗೆ ಹೋಗಿ ಖಾತೆ ತೆರೆಯಲು ಅಥವಾ 50,000 ರೂ.ಗಿಂತ ಹೆಚ್ಚಿನ ಹಣವನ್ನ ಠೇವಣಿ/ಹಿಂತೆಗೆದುಕೊಳ್ಳಲು ಪ್ರಯತ್ನಿಸಿದರೆ, ನೀವು ನಿಮ್ಮ ಪ್ಯಾನ್ ಕಾರ್ಡ್ ನೀಡಬೇಕಾಗುತ್ತೆ. ತಪ್ಪು ಅಥವಾ ನಿಷ್ಕ್ರಿಯ ಪ್ಯಾನ್ ನೀಡಿದ್ರೆ 10 ಸಾವಿರ ರೂಪಾಯಿ ದಂಡ ವಿಧಿಸ್ಬೋದು. ಈ ನಿಬಂಧನೆಗಳ ಪ್ರಕಾರ, ಅಂತಹ ಯಾವುದೇ ಅನುಸರಣೆಗೆ ದಂಡವನ್ನು ವಿಧಿಸಬಹುದು.
ಬ್ಯಾಂಕ್ ಖಾತೆ ತೆರೆಯುವುದು, ಮ್ಯೂಚುವಲ್ ಫಂಡ್ ಅಥವಾ ಷೇರುಗಳನ್ನು ಖರೀದಿಸುವುದು, 50 ಸಾವಿರ ರೂ.ಗಿಂತ ಹೆಚ್ಚು ನಗದು ವ್ಯವಹಾರ ಮಾಡುವುದು ಸೇರಿದಂತೆ ಹಲವು ಉದ್ದೇಶಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ. ಆದ್ರೆ, ಪ್ಯಾನ್ ಕಾರ್ಡ್ ಹೊಂದಿರುವವರು ಆಧಾರ್ ಲಿಂಕ್ ಮಾಡಿ. ಇಲ್ಲದಿದ್ರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತೆ.
ಅಂದ್ಹಾಗೆ, ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡೋದು ತುಂಬಾ ಸುಲಭ. ಇದನ್ನು ಎಸ್ ಎಂಎಸ್ ಮೂಲಕವೂ ಮಾಡ್ಬೋದು.
ಪ್ಯಾನ್- ಆಧಾರ್ ಲಿಂಕ್ ಮಾಡಲು ಈ ಸುಲಭ ಕ್ರಮಗಳನ್ನ ಅನುಸರಿಸಿ..!
* ಆಧಾರ್ ಪ್ಯಾನ್ ಲಿಂಕ್ ಮಾಡಲು 567678 ಅಥವಾ 56161ಗೆ ಎಸ್ ಎಂಎಸ್ ಕಳುಹಿಸಬೇಕು.
SMSನ ಸ್ವರೂಪವು ಕೆಳಕಂಡಂತಿದೆ.
* ಯುಐಡಿಎಐ ಪಾನ್(12ಅಂಕಿಯ ಆಧಾರ್ ಸಂಖ್ಯೆ) ಸ್ಥಳ (10 ಅಂಕಿಗಳ ಪ್ಯಾನ್ ಸಂಖ್ಯೆ).
ಯಾರಾದರೂ ಆಧಾರ್ ಕಾರ್ಡ್ ಸಂಖ್ಯೆ ABCDXXXXXXXXXX ಮತ್ತು ಪ್ಯಾನ್ ಕಾರ್ಡ್ ಸಂಖ್ಯೆ ABCXXXXXXX ಹಾಗೂ ಎಸ್ ಎಂಎಸ್ʼನ ಸ್ವರೂಪವು ‘UIDAIPANABCDXXXXXXXXXX ABCXXXXXXX’ ಆಗಿರುತ್ತೆ.