ಬೆಂಗಳೂರು : ಪೊಲೀಸರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ಕಡ್ಡಾಯ ವಾರದ ರಜೆ ನೀಡುವಂತೆ ಎಲ್ಲ ಠಾಣಾಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಕಚೇರಿ ಆಡಳಿತ ವಿಭಾಗ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ.
ಡಿಸಿಪಿ ನಿಶಾ ಜೇಮ್ಸ್ ಹೊರಡಿಸಿರುವ ಆದೇಶದ ಪ್ರಕಾರ, ವಿಪತ್ತು, ಚುನಾವಣೆ ಮತ್ತು ಬಂದೋಬಸ್ತ್ ಕರ್ತವ್ಯ ಹೊರತು ಪಡಿಸಿ ಉಳಿದ ಎಲ್ಲ ಸಮಯದಲ್ಲಿ ಸಿಬ್ಬಂದಿಗೆ ಕಡ್ಡಾಯವಾಗಿ ರಜೆ ನೀಡಬೇಕು. ಇದಕ್ಕಾಗಿ ಆಯಾ ಠಾಣಾಧಿಕಾರಿಗಳು ಸಿಬ್ಬಂದಿಯ ವಾರದ ರಜೆ ಕುರಿತು ಸರತಿ ಪಟ್ಟಿ ಸಿದ್ಧಪಡಿಸಬೇಕು. ಒಂದು ವೇಳೆ ವಾರದ ರಜೆ ದಿನದಂದು ಕರ್ತವ್ಯ ನಿರ್ವಹಿಸಿದರೆ ಅಂತವರಿಗೆ ವಾರದ ರಜೆ ಭತ್ಯೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.