ಕೊರೊನಾ ಮಹಾಮಾರಿಗೆ ವಿಧಾನಸೌಧದ ನೌಕರನೊಬ್ಬ ಕಳೆದ ರಾತ್ರಿ ಬಲಿಯಾಗಿದ್ದಾನೆ

Spread the love

ಬೆಂಗಳೂರು,ಜೂ.30- ಕೊರೊನಾ ಮಹಾಮಾರಿಗೆ ವಿಧಾನಸೌಧದ ನೌಕರನೊಬ್ಬ ಕಳೆದ ರಾತ್ರಿ ಬಲಿಯಾಗಿದ್ದಾನೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ(ಡಿಪಿಎಆರ್) ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 36 ವರ್ಷ ನೌಕರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ನೌಕರನಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಜೆ ತೆಗೆದುಕೊಳ್ಳಲು ಸೂಚನೆ ಕೊಡಲಾಗಿತ್ತು. ಅದರಂತೆ ಆತ ಮೈಸೂರಿಗೆ ತೆರಳಿ ಕೋವಿಡ್-19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವುದರಿಂದ ಆತನ ಟ್ರಾವೆಲ್ ಹಿಸ್ಟರಿ(ಪ್ರವಾಸದ ಹಿನ್ನೆಲೆ)ಯನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ


Spread the love

About Laxminews 24x7

Check Also

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ, ತನಿಖೆಯಲ್ಲಿ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರೋದು ಪತ್ತೆ..!!

Spread the loveಉದ್ಯಮಿ ಸಿಜೆ ರಾಯ್ ಆತ್ಮ**ತ್ಯೆ ಪ್ರಕರಣ, ತನಿಖೆಯಲ್ಲಿ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರೋದು ಪತ್ತೆಯಾಗಿದೆ. ಉದ್ಯಮಿ ಬಳಿಯಿಂದ ಹಣಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ