Breaking News

ಕೊರೋನಾ‌ ಎರಡನೇ ಅಲೆ: ಬೆಂಗಳೂರಿನ ಈ 10 ಏರಿಯಾಗಳ ಕಡೆ ಹೋಗಲೇ ಬೇಡಿ!

Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಬಾರಿಗೆ ಕೊರೋನಾ‌ ಸುಳಿಯಲ್ಲಿದೆ. ಇಂದು ನಗರದ ಒಂದೇ ಅಪಾರ್ಟ್ಮೆಂಟ್ ನಲ್ಲಿ ಏಳು ಪ್ರಕರಣಗಳು ಬೆಳಕಿಗೆ ಬಂದಿದೆ. ಜೊತೆಯಲ್ಲಿ ಬೆಂಗಳೂರಿನ ಈ 10 ಏರಿಯಾಗಳು ಕೊರೋನ ಹಾಟ್ ಸ್ಪಾಟ್ ಅಂತ ಬಿಬಿಎಂಪಿ ವರದಿ ಹೇಳುತ್ತಿದೆ. ಸತತ ಐದನೇ ದಿನವೂ ನಗರದಲ್ಲಿ ಸಾವಿರದ ಗಡಿ ದಾಟಿದ ಕೊರೋನಾ ರಣಕೇಕೆ ಹಾಕಿದೆ. ಇದರ ಬೆನ್ನಲ್ಲೇ ನಗರದ ನಾಗಸಂಧ್ರದ ಶೋಭಾ ಅಪಾರ್ಟ್ಮೆಂಟ್ ವೊಂದರಲ್ಲೇ ಏಳು ಪ್ರಕರಣಗಳು ಪತ್ತೆಯಾಗಿದೆ. ಒಂದೇ ಪ್ಲ್ಯಾಟ್ ನ ನಾಲ್ವರು, ಪಕ್ಕದಲ್ಲಿದ್ದಿದ್ದ ಮನೆಯಲ್ಲಿ ಮೂವರಿಗೆ ಸೋಂಕು ಧೃಢವಾಗಿದೆ. ಈ ಹಿನ್ನೆಲೆ ಕೊರೋನಾ ಸೋಂಕಿತರ ಪ್ಲ್ಯಾಟನ್ನು ಕಂಟೈನ್ಮೆಂಟ್ ಮಾಡಿದೆ ಬಿಬಿಎಂಪಿ.

ಕಳೆದ ಒಂದು ವಾರದಿಂದ ನಗರದಲ್ಲಿ ಕೊರೋನಾ ಸೂಪರ್ ಸ್ಪ್ರೆಡ್ ಆಗ್ತಿದೆ. ಸಾವಿರದ ಗಡಿ ದಾಟಿಯೇ ಪ್ರಕರಣಗಳು ದಾಖಲಾಗ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡೇ ಕೆಲವೊಂದು ಟಫ್ ರೂಲ್ಸನ್ನು ಈಗಾಗಲೇ ಬಿಬಿಎಂಪಿ ಜಾರಿ ಮಾಡಿದೆ. ಇದರ ಜೊತೆಗೆ ನಗರದ ಹತ್ತು ವಾರ್ಡ್ ಗಳನ್ನು ಡೇಂಜರ್ ಸ್ಪಾಟ್ಗಳು ಅಂತ ಹೇಳಿದೆ ಬಿಬಿಎಂಪಿ. ಯಾವುದು ಗೊತ್ತಾ ಕೊರೋನಾ ಡೇಂಜರ್ ಏರಿಯಾಗಳು..!?

1. ವಾರ್ಡ್ ಸಂಖ್ಯೆ 150 : ಬೆಳ್ಳಂದೂರು
2. ವಾರ್ಡ್ ಸಂಖ್ಯೆ 176 : ಬಿಟಿಎಂ ಲೇಔಟ್
3. ವಾರ್ಡ್ ಸಂಖ್ಯೆ 84 : ಹಗದೂರು
4. ವಾರ್ಡ್ ಸಂಖ್ಯೆ 111 : ಶಾಂತಲ ನಗರ 5. ವಾರ್ಡ್ ಸಂಖ್ಯೆ 195 : ಕೋಣನಕುಂಟೆ
6. ವಾರ್ಡ್ ಸಂಖ್ಯೆ 27 : ಬಸವನಗುಡಿ
7. ವಾರ್ಡ್ ಸಂಖ್ಯೆ 161 : ಹೊಸಕೆರೆಹಳ್ಳಿ
8. ವಾರ್ಡ್ ಸಂಖ್ಯೆ 85 : ದೊಡ್ಡನಕುಂದಿ
9. ವಾರ್ಡ್ ಸಂಖ್ಯೆ 58 : ಹೊಸ ತಿಪ್ಪ ಸಂಧ್ರ
10. ವಾರ್ಡ್ ಸಂಖ್ಯೆ 194 : ಗೊಟ್ಟಿಗೆರೆ

: Fastag: ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದ ಕೇಂದ್ರ, ಫಾಸ್ಟ್ಯಾಗ್ ಕಡ್ಡಾಯದ ನಂತರ ಟೋಲ್ ಶುಲ್ಕ ಹೆಚ್ಚಳ

ಈ ಹತ್ತು ವಾರ್ಡ್‌ಗಳಿಗೆ ಹೋಗದೇ ಇರೋದೇ ಒಳ್ಳೆದು. ದಿನದಿಂದ ದಿನಕ್ಕೆ ಈ ಏರಿಯಾಗಳಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಸರಾಸರಿ ಒಂದರಂತೆ ಈ ಏರಿಯಾಗಳಲ್ಲಿ ಕೊರೋನಾ ಕೇಸ್ ಅಧಿಕವಾಗುತ್ತಿದೆ. ಕಳೆದ ಏಳು ದಿನಗಳ ಬಿಬಿಎಂಪಿ ಹೊರ ಬಿಟ್ಟ ಮಾಹಿತಿ ಆಧರಿಸಿದ ಮಾಹಿತಿ ಇವು. ಮತ್ತೊಮ್ಮೆ ನಗರದಲ್ಲಿ ಕೊರೋನಾ ರಣಕೇಕೆಯ ಮುನ್ಸೂಚನೆನಾ ಇದು ಅನ್ನೋ ಪ್ರಶ್ನೆ ಕಾಡತೊಡಗಿದೆ ಸದ್ಯಕ್ಕೆ.

ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಮತ್ತೊಮ್ಮೆ ಲಾಕ್ ಡೌನೇ ಗತಿ ಅನ್ನುವಂತಾಗಿದೆ ಪರಿಸ್ಥಿತಿ. ಈಗಾಗಲೇ ಅಪಾರ್ಟ್ಮೆಂಟ್‌ಗಳು, ಹಾಸ್ಟೆಲ್‌ಗಳನ್ನು ಟಾರ್ಗೆಟ್ ಮಾಡಿರುವ ಕೊರೊನಾ ಮಹಾಮಾರಿ, ತೀವ್ರಗತಿಯಲ್ಲಿ ಎರಡನೇ ಬಾರಿಯೂ ಹಬ್ಬುತ್ತಿದೆ. ಸರ್ಕಾರ ಎಷ್ಟೇ ಎಚ್ಚರಿಕೆವಹಿಸದರೂ ಜನರು ಎಚ್ಚೆತ್ತುಕೊಂಡಿಲ್ಲಾಂದ್ರೆ ಮತ್ತೊಮ್ಮೆ ಪರದಾಡಬೇಕಾದ ಸ್ಥಿರಿ ನಿರ್ಮಾಣವಾಗಬಹುದು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ