Breaking News

ಘಟಪ್ರಭಾ ಸಮೀಪದ ಶಿಂದಿಕುರಬೇಟ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ ಸಾರಾಯಿ ಕುಡಿದು ರೋಗಿಗಳಿಗೆ ಚಿಕಿತ್ಸೆ

Spread the love

ಹೆಣ್ಣು ಮಗಳು ಹೆಣ್ಣು ಕುಲಕ್ಕೆ ಮತ್ತು ವೈದ್ಯ ಕುಲಕ್ಕೆ ಅಪಮಾನ ಮಾಡಿದ್ದಾರೆ . ಸಾರಾಯಿ ಕುಡಿದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ . ಅಷ್ಟೇ ಅಲ್ಲದೇ ಸಿಗರೇಟ್ ಸೇದಿ ಹೊಗೆ ಕೂಡ ಬಿಟ್ಟಿದ್ದಾರೆ . ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ.

 

ಹೀಗೆ ಸಿಗರೇಟ್ ಸೇರಿ ಹೊಗೆ ಬಿಡುತ್ತಿರುವ, ಸಾರಾಯಿ ಕುಡಿಯುತ್ತಿರುವ ಈ ಮಹಿಳೆಯರು ಗೋಕಾಕ್ ತಾಲೂಕಿನ ಘಟಪ್ರಭಾ ಸಮೀಪದ ಶಿಂದಿಕುರಬೇಟ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ ಮತ್ತು ಗ್ರೂಪ್ ಡಿ. ಈ ಮಹಿಳೆಯರು ಸಿಗರೇಟ್ ಸೇದುವುದು, ಸಾರಾಯಿ ಕುಡಿಯುವುದು ನಿತ್ಯ ಚಟವಾಗಿ ಬಿಟ್ಟಿದೆ. ಈ ರೀತಿ ಮದ್ಯಪಾನ-ಧೂಮಪಾನ ಮಾಡದೇ ಯಾವ ರೋಗಿಗೂ ಟ್ರಿಟ್ಮೆಂಟ್ ಕೊಡೋದೇ ಇಲ್ಲವಂತೆ. ಅಷ್ಟೇ ಅಲ್ಲದೇ ಇಂಜಕ್ಷನ್‍ಗೆ ರೋಗಿಗಳಿಂದ ಹಣವನ್ನು ಈ ಮಹಿಳೆಯರು ಪಡೆಯುತ್ತಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

: ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಆದರೆ ಈಯಮ್ಮದಿರು ಅದಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ . ಇನ್ನು ರೋಗಿಗಳಿಗೆ ಏಕವಚನದಲ್ಲಿಯೇ ಮಾತಾಡಿಸುವ ಈ ನರ್ಸ ಈ ರೀತಿ ದುರ್ವರ್ತನೆ ತೋರಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದರಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಲಾಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಭಾವಪೂರ್ಣ ಶ್ರದ್ಧಾಂಜಲಿ

Spread the loveಶ್ರೀಮಠದ ಹಿರಿಯ ಸ್ವಾಮಿಜಿಗಳು, ಸುಕ್ಷೇತ್ರ ತವಗಮಠ) ಗೋಕಾಕ ತಾಲೂಕಿನ ಸುಕ್ಷೇತ್ರ ತವಗ ಮಠದ ಬ್ರಹ್ಮಶ್ರೀ ಶ್ರೀ ಸಿದ್ದಲಿಂಗಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ