ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ 23 ಮಂದಿಗೆ ಕೊರೊನಾ ಕೊರೊನಾ ಸೋಂಕು ದೃಢವಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 1102 ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಮಂಗಳವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದು, ಇಂದು ಮೃತರಾದ ನಾಲ್ವರು ಬೆಳಗಾವಿ ತಾಲೂಕಿಗೆ ಸೇರಿದವರಾಗಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಮೃತರ ಸಂಖ್ಯೆ 30 ಕ್ಕೆ ತಲುಪಿದೆ.
ಜಿಲ್ಲೆಯ 1102 ಸೋಂಕಿತರ ಪೈಕಿ 461 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 611 ಪ್ರಕರಣ ಸಕ್ರಿಯವಾಗಿವೆ.
ತಾಲೂಕಾವಾರು ಅಂಕಿ ಅಂಶ:
ಬೈಲಹೊಂಗಲ-11
ಬೆಳಗಾವಿ-5
ಹುಕ್ಕೇರಿ- 3
ಚಿಕ್ಕೋಡಿ-4