ಚಾಮರಾಜನಗರ: ಕೊರೊನಾ ಎಪೆಕ್ಟ್ ಸರಕು ಸಾಗಣೆ ವಾಹನಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಹೀಗಾಗಿ ಖಾಲಿ ಖಾಲಿ ಆಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವನ್ಯಜೀವಿಗಳು ನಿರ್ಭೀತಿಯಿಂದ ಓಡಾಟ ಮಾಡುತ್ತಿವೆ.
ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳು ಹಿಂಡು ರಸ್ತೆಯಲ್ಲಿ ನಡೆದುಕೊಂಡು ಹೋಗಿವೆ. 8ಕ್ಕೂ ಹೆಚ್ಚು ಆನೆಗಳು ಸುಮಾರು 2 ಕಿಲೋ ಮೀಟರ್ ತನಕ ರಸ್ತೆಯಲ್ಲೇ ನಡೆದು ಹೋಗಿವೆ. ಸ್ಥಳದಲ್ಲಿದ್ದವರು ಆನೆಗಳು ನಡೆದುಕೊಂಡು ಹೋಗುತ್ತಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಕೊರೊನಾ ಕಡಿಮೆಯಾಗದ ಕಾರಣ ಸರಕು ಸಾಗಣೆ ವಾಹನಗಳ ಸಂಖ್ಯೆಯಲ್ಲೂ ಇಳಿಮುಖ ಆಗಿದೆ. ಇದರಿಂದ ಖಾಲಿ ಖಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವನ್ಯಜೀವಿಗಳು ಓಡಾಟ ಮಾಡುತ್ತಿವೆ.
ಅಷ್ಟೇ ಅಲ್ಲದೇ ರಾಜ್ಯದ ಗಡಿಭಾಗವಾದ ಹಾಸನೂರು ರಸ್ತೆಯ ಸಮೀಪದಲ್ಲಿ ಮರವೊಂದರ ಮೇಲೆ ಚಿರತೆ ಒಂದೂವರೆ ತಾಸಿಗೂ ಹೆಚ್ಚು ಕಾಲ ಕುಳಿತಿತ್ತು. ಇನ್ನೂ ಕಾಡು ಹಂದಿಗಳ ಹಾವಳಿ ಈಗ ಜಮೀನಿಗಿಂತ ರಸ್ತೆಯಲ್ಲೇ ಹೆಚ್ಚಾಗಿದೆ. ಕೇವಲ ರಾತ್ರಿ ವೇಳೆಯಲ್ಲಿ ಕಾಣಬಹುದಾಗಿದ್ದ ಆನೆಗಳ ಹಿಂಡು, ಚಿರತೆಗಳು ಇದೀಗ ಮಧ್ಯಾಹ್ನವೇ ರಸ್ತೆಯಲ್ಲಿ ಓಡಾಡುತ್ತಿವೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.