Breaking News

ಕೋವಿಡ್ ಲಸಿಕೆ ಎಲ್ಲಿ ಸಿಗುತ್ತೆ..? ಬೆಲೆ ಎಷ್ಟು..? ಇಲ್ಲಿದೆ ಪೂರ್ಣ ಮಾಹಿತಿ

Spread the love

ಬೆಂಗಳೂರು, ಮಾ.1- ರಾಜ್ಯದಲ್ಲೂ ಮೂರನೆ ಹಂತದ ಕೊರೊನಾ ಲಸಿಕಾ ಕಾರ್ಯಕ್ರಮ ಆರಂಭವಾಗಿದ್ದು , 250ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಇಂದಿನಿಂದ ಲಸಿಕಾ ಅಭಿಯಾನ ಆರಂಭಗೊಂಡಿದೆ. ಬಿಬಿಎಂಪಿಯ ಆರೋಗ್ಯ ಕೇಂದ್ರಗಳು ಸೇರಿದಂತೆ ರಾಜ್ಯದ 250 ಆಸ್ಪತ್ರೆಗಳಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಇರುವ 45 ವರ್ಷ ಮೇಲ್ಪಟ್ಟ ಮಧ್ಯ ವಯಸ್ಕರಿಗೆ ಲಸಿಕೆ ಹಾಕಲಾಗುತ್ತಿದೆ.

ಕೋ-ವಿನ್ 2.0 ಆ್ಯಪ್ ಮತ್ತು ಪೋರ್ಟಲ್‍ಗಳು ಬೆಳಗ್ಗೆ 9 ಗಂಟೆಯಿಂದ ಸಕ್ರಿಯವಾಗಿದ್ದು , ಲಸಿಕೆ ಪಡೆಯಲಿಚ್ಛಿಸುವವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೃದಯ ಕಾಯಿಲೆ , ಕಿಡ್ನಿ ವೈಫಲ್ಯ, ಬಿಪಿ, ಶುಗರ್, ಥೈರಾಯ್ಡ್ ಮತ್ತಿತರ ಕಾಯಿಲೆಗಳಿಂದ ನರಳುತ್ತಿರುವವರು ಲಸಿಕೆ ಪಡೆದು ಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಪ್ರಾರಂಭಿಕ ಹಂತದಲ್ಲಿ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಎರಡು ಖಾಸಗಿ ಆಸ್ಪತ್ರೆಗಳು ಹಾಗೂ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ , ಸಿ.ವಿ.ರಾಮನ್ ಆಸ್ಪತ್ರೆ ಸೇರಿದಂತೆ ಬಿಬಿಎಂಪಿಯಲ್ಲಿನ 18 ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಇಂದಿನಿಂದ ಮೂರನೆ ಹಂತದ ಲಸಿಕೆ ಹಾಕಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ ಆನ್‍ಲೈನ್ ನೋಂದಾಯಿತ ಫಲಾನುಭವಿಗಳಿಗೆ ನಗರ ಪ್ರದೇಶಗಳಲ್ಲಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆನ್‍ಸೈಟ್ ಮತ್ತು ಆನ್‍ಲೈನ್ ನೋಂದಣಿದಾರರಿಗೆ ಲಸಿಕೆ ನೀಡಲಾಗುತ್ತಿದೆ.ಮುಂಬರುವ ದಿನಗಳಲ್ಲಿ ಉಳಿದ ನೋಂದಣಿ ವಿಧಾನಗಳಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು. ಇದರ ಜತೆಗೆ ಲಸಿಕಾ ವಿತರಣಾ ಕೇಂದ್ರಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ , ಬುಧವಾರ, ಶುಕ್ರವಾರ ಮತ್ತು ಶನಿವಾರ ಲಸಿಕೆ ನೀಡಲಾಗುವುದು.


Spread the love

About Laxminews 24x7

Check Also

ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ ನಿರ್ಮಾಣ”

Spread the love“ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ