ಬೆಂಗಳೂರು: ಕೊರೊನಾ ಆತಂಕ ಮಾತ್ರ ಕಡಿಮೆ ಆಗುತ್ತಲೇ ಇಲ್ಲ. ಪಕ್ಕದ ಬೀದಿಯಲ್ಲಿ ಬಂತು, ಮನೆಯ ಹಿಂದೆಯ ನಿವಾಸಿಗೆ ಸೋಂಕು ತಗುಲಿತು ಎಂಬ ವಿಷಯಗಳನ್ನು ನೀವು ಕೇಳಿರುತ್ತೀರಿ. ಕೊರೊನಾ ಭಯ ಬೇಡ ಮುಂಜಾಗ್ರತೆ ಇರಲಿ ಎಂದು ತಜ್ಞರು ಸೇರಿದಂತೆ ಸರ್ಕಾರ ಸಲಹೆಗಳನ್ನು ನೀಡುತ್ತಾ ಬಂದಿದೆ. ಆರೋಗ್ಯ ಇಲಾಖೆ ಸಹ ಕೊರೊನಾಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ನೀಡುವ ಪ್ರಯತ್ನವನ್ನು ಮಾಡುತ್ತಿದೆ.
ಮನೆಯಲ್ಲಿ ಮಕ್ಕಳು ಮತ್ತು ಹಿರಿಯರು ಇದ್ರೆ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ತಾಯಂದಿರು ಮಕ್ಕಳಿಗೆ ಹಾಲುಣಿಸುವ ಮುನ್ನ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.
ಮುಂಜಾಗ್ರತ ಕ್ರಮಗಳು:
1. ಮಗುವಿಗೆ ಹಾಲುಣಿಸುವ ಮುನ್ನ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
2. ಹಾಲುಣಿಸುವಾಗ ತಾಯಿ ಮಾಸ್ಕ್ ಧರಿಸಿದ್ರೆ ಒಳ್ಳೆಯದು.
3. ಮಗು ಇರೋ ಸ್ಥಳವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.
ಮಕ್ಕಳಿರುವ ಮನೆಗಳಲ್ಲಿರುವ ಹಿರಿಯರು ಹೊರಗಡೆಯಿಂದ ಒಳಗೆ ಬರುತ್ತಿದ್ದಂತೆ ಸ್ನಾನ ಮಾಡಿಕೊಳ್ಳಬೇಕು. ಹೊರಗಡೆ ಹೋದಾಗ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ಅಥವಾ ಸ್ಯಾನಿಟೈಸ್ ನಿಂದ ತೊಳೆಯುತ್ತಿರಬೇಕು.