Breaking News

ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು!?

Spread the love

ಮೈಸೂರು : ಮೈಸೂರು ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಅಂತ್ಯವಾದ ನಂತರ ಕಾಂಗ್ರೆಸ್ ನಲ್ಲಿ ಭಿನ್ನಮತ ಶುರುವಾಗಿದೆ.

ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿಗೆ ಅಪಸ್ವರ ಕೇಳಿ ಬಂದಿದೆ. ಶಾಸಕ ತನ್ವೀರ್ ಸೇಠ್‌ ಗೆ ಕೆಪಿಸಿಸಿ ವತಿಯಿಂದ ನೊಟೀಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ

ಅವರ ವಿರುದ್ಧ ಈ ಸಂದರ್ಭದಲ್ಲಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕೋಮುವಾದಿ ಬಿಜೆಪಿಯನ್ನು ದೂರ ಮಾಡಲು ಶಾಸಕ ತನ್ವೀರ್ ತಂತ್ರ ಉಪಯೋಗಿಸಿ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಒಪ್ಪಿಕೊಂಡರು. ಅಂಥವರಿಗೆ ಕೆಪಿಸಿಸಿಯಿಂದ ನೋಟಿಸ್ ಕೊಡಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಕೆಳಮಟ್ಟದ ನಾಯಕರನ್ನು ಸಿದ್ದರಾಮಯ್ಯ ಬೆಳೆಯಲು ಬಿಡುತ್ತಿಲ್ಲ. ನೊಟೀಸ್ ಕೊಟ್ಟರೆ ನಾವು ಉಗ್ರರೂಪದ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟಿಸಿದರು.


Spread the love

About Laxminews 24x7

Check Also

SSLC ಪರೀಕ್ಷೆ| 625 ಅಂಕದ ಬದಲು 525ಕ್ಕೆ ಇಳಿಕೆ

Spread the loveಬೆಂಗಳೂರು: ಇನ್ನು ಮುಂದೆ  ಎಸ್‌ಎಸ್‌ಎಲ್‌ಸಿ ಪರೀಕ್ಷೆ  625ರ ಬದಲಿಗೆ 525 ಅಂಕಗಳಿಗೆ ನಡೆಸಲು ಕರ್ನಾಟಕ ಸರ್ಕಾರ ಮಹತ್ವದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ