ಬೆಳಗಾವಿ – ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ, ಮೂರು ಸಲ ಕರ್ನಾಟಕ ಕೇಸರಿ ಪುರಸ್ಕೃತ, ಹಿರಿಯ ಪೈಲ್ವಾನ್ ಚಂದ್ರು ಕುರವಿನಕೊಪ್ಪ ನಿಧನರಾಗಿದ್ದಾರೆ.
ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಇಬ್ಬರು ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.
ಪೈಲವಾನ್ ಚಂದ್ರು ಅವರ ನಿಧನಕ್ಕೆ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಂತಾಪ ಸೂಚಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಮೃತರ ಮನೆಗೆ ಧಾವಿಸಿದ ಲಕ್ಷ್ಮಿ ಹೆಬ್ಬಾಳಕರ್ ಚಂದ್ರ ಕುರವಿನಕೊಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ವೇಳೆ 20ಕ್ಕೂ ಹೆಚ್ಚು ಕುಸ್ತಿಪಟುಗಳು ಆಗಮಿಸಿ ಸಂತಾಪ ಸೂಚಿಸಿದರು.
Laxmi News 24×7