Breaking News

ಉತ್ತರಕರ್ನಾಟಕಕ್ಕೆ ಅನ್ಯಾಯ ಆದ್ರೆ ಮಂತ್ರಿಗಿರಿ ಇರಲಿ..ಬಿಡಲಿ..ಹೋರಾಟ ಮಾಡುತ್ತೇನೆ..ಉಮೇಶ ಕತ್ತಿ

Spread the love

 

ಅಭಿವೃದ್ಧಿಯಲ್ಲಿ ಉತ್ತರಕರ್ನಾಟಕಕ್ಕೆ ಅನ್ಯಾಯವಾದ್ರೆ ಪ್ರತಿಭಟನೆ ಮಾಡಿಯೇ ಮಾಡುತ್ತೇನೆ. ನಾನು ಮಂತ್ರಿ ಆಗಿರಲಿ ಅಥವಾ ಆಗದೇ ಇರಲಿ ಎಂದು ಆಹಾರ ಸಚಿವ ಉಮೇಶ ಕತ್ತಿ ಮತ್ತೆ ಉತ್ತರಕರ್ನಾಟಕದ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಮೇಶ ಕತ್ತಿ ಉತ್ತರಕರ್ನಾಟಕದಲ್ಲಿ ಏನು ಆಗಬೇಕೋ ಅದು ಆಗಲೇಬೇಕು. ಉತ್ತರಕರ್ನಾಟಕದಲ್ಲಿ ಆಗಬೇಕಿದ್ದ ಕೆಲಸ ಆಗದಿದ್ದಾಗ ನಾನು ಮಂತ್ರಿ ಇರಲಿ, ಬಿಡಲಿ ಪ್ರತಿಭಟನೆ ಮಾಡಿಯೇ ಮಾಡುತ್ತೇನೆ ಎಂದರು. ಇನ್ನು ಬಜೆಟ್ ಅಧಿವೇಶನ ಬೆಂಗಳೂರಿನಲ್ಲಿ ಆಗುತ್ತದೆ.

ಜೂನ್‍ನಲ್ಲಿ ನಡೆಯುವ ಅಧಿವೇಶನ ಬೆಳಗಾವಿ ಸುವರ್ಣಸೌಧದಲ್ಲಿಯೇ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ