Breaking News

ಪ್ರೇಮಿಗಳ ದಿನವನ್ನು ನಿಮ್ಮ ಪ್ರೇಮಿಯೊಂದಿಗೆ ಕೊಳಚೆ ನೀರಿನ ಶುದ್ಧೀಕರಣ ಘಟಕದಲ್ಲಿ ಕಳೆಯುವುದನ್ನು ಎಂದಾದರೂ ಊಹಿಸಿದ್ದೀರಾ?

Spread the love

ಪ್ರೇಮಿಗಳ ದಿನವನ್ನು ನಿಮ್ಮ ಪ್ರೇಮಿಯೊಂದಿಗೆ ಕೊಳಚೆ ನೀರಿನ ಶುದ್ಧೀಕರಣ ಘಟಕದಲ್ಲಿ ಕಳೆಯುವುದನ್ನು ಎಂದಾದರೂ ಊಹಿಸಿದ್ದೀರಾ?

ನ್ಯೂಯಾರ್ಕ್‌ನ ನ್ಯೂಟೌನ್‌ ಕ್ರೀಕ್‌ನ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಪ್ರೇಮಿಗಳ ದಿನದಂದು ಜೋಡಿಗಳಿಗೆ ವರ್ಚುವಲ್ ಟೂರ್‌ ಒಂದನ್ನು ಆಯೋಜಿಸುವ ಜನಪ್ರಿಯ ಐಡಿಯಾ ಒಂದು ಸದ್ದು ಮಾಡುತ್ತಿದೆ. ಫೆಬ್ರವರಿ 14ರ ಸಂಜೆಯ ವೇಳೆ ಈ ಸಂಬಂಧ ಆನ್ಲೈನ್‌ ಟೂರ್‌ ಒಂದನ್ನು ಈ ಘಟಕ ಆಯೋಜಿಸಿದೆ.

ತಲಾ $5 ನಂತೆ ಟಿಕೆಟ್ ಬೆಲೆ ನಿಗದಿಯಾಗಿರುವ ಈ ಪ್ರವಾಸವನ್ನು ನ್ಯೂಯಾರ್ಕ್‌ನ ಪರಿಸರ ಸಂರಕ್ಷಣೆ ಇಲಾಖೆ ಹಾಗೂ ಓಪನ್‌ ಹೌಸ್‌ಗಳು ಜಂಟಿಯಾಗಿ ಆಯೋಜಿಸಿವೆ.

ಸಾಮಾನ್ಯವಾಗಿ ಜೋಡಿಗಳು ಖುದ್ದು ಭೇಟಿ ಕೊಟ್ಟು ಪ್ರವಾಸ ಮಾಡುತ್ತಿದ್ದ ಈ ಪ್ರೋಗ್ರಾಂ ಅನ್ನು ಕೋವಿಡ್-19 ಕಾರಣದಿಂದಾಗಿ ಈ ವರ್ಷ ವರ್ಚುವಲ್ ಅಭಿಯಾನವನ್ನಾಗಿ ಮಾಡಲಾಗಿದೆ.

ನ್ಯೂಯಾರ್ಕ್‌ನ ಲಕ್ಷಾಂತರ ಮನೆಗಳಿಂದ ತ್ಯಾಜ್ಯ ನೀರನ್ನು ಸಂಗ್ರಹಿಸುವುದು ಹಾಗೂ ಚರಂಡಿಗಳನ್ನು ವ್ಯವಸ್ಥಿತವಾಗಿ ಇಡುವುದು ಹೇಗೆ ಎಂದು ಈ ವರ್ಚುವಲ್ ಪ್ರವಾಸದಲ್ಲಿ ಕಾಣಬಹುದಾಗಿದೆ. ಕೊಳಚೆ ನಿರ್ವಹಣೆ ಸಂಬಂಧ ಸಾರ್ವಜನಿಕರಿಗೆ ಇರುವ ಜವಾಬ್ದಾರಿಗಳ ಕುರಿತಂತೆ ಸಾರ್ವಜನಿಕ ಅರಿವು ಮೂಡಿಸುವ ಪ್ರಯತ್ನವನ್ನೂ ಸಹ ಈ ಮೂಲಕ ಮಾಡಲಾಗುತ್ತದೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ