ಬೆಂಗಳೂರು: ಬೇರೆ ಭಾಷೆಯಿಂದಾಗಿ ನಮ್ಮ ಚಿತ್ರರಂಗ ಇತ್ತೀಚೆಗಿನ ದಿನಗಳಲ್ಲಿ ಬೇರೆ ಲೆವೆಲ್ ಗೆ ಹೋಗಿಲ್ಲ. ಕನ್ನಡಕ್ಕೆ ಕನ್ನಡದ್ದೇ ಆದ ನೆಲೆ, ಸ್ಥಾನ-ಮಾನವಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.
ತಮ್ಮ ಚಿತ್ರಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಮಾಧ‍್ಯಮಗಳೊಂದಿಗೆ ಮಾತನಾಡಿದ ಸುದೀಪ್, ಕನ್ನಡ ಸಿನಿಮಾ ಈಗ ಬೇರೆ ಭಾಷೆಗಳಲ್ಲೂ ಮಿಂಚುತ್ತಿದೆ. ಇದರಿಂದಾಗಿ ನಮ್ಮ ಸಿನಿಮಾದ ಲೆವೆಲ್ ಬೇರೆಯಾಗಿದೆ ಎಂದು ನಿಮಗನಿಸುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ತಮಿಳು, ತೆಲುಗು, ಭಾಷೆಗಳಿಂದಾಗಿ ನಮ್ಮ ಸಿನಿಮಾ ಬೇರೆ ಮಟ್ಟಕ್ಕೆ ಹೋಗಿದ್ದಲ್ಲ. ಕನ್ನಡ ಸಿನಿಮಾಗೆ ಅದರದ್ದೇ ಆದ ಸ್ಥಾನ ಮಾನವಿದೆ. ಅಂದು ಎಲ್ಲರೂ ಓಡುತ್ತಿದ್ದರು, ನಾವು ನಡೆಯುತ್ತಿದ್ದೆವು. ಈಗ ನಾವೂ ಓಡಲು ಆರಂಭಿಸಿದ್ದೇವೆ. ಇದಕ್ಕೆ ಹಲವರು ಕಾರಣ. ಆ ಯಶಸ್ಸಿನಲ್ಲಿ ನಾವೂ ಭಾಗಿಯಾಗೋಣ ಎಂದಿದ್ದಾರೆ.
Laxmi News 24×7