Breaking News

ಪ್ರಭಾಸ್‍ಗೆ ಬಾಲಿವುಡ್ ಪದ್ಮಾವತಿ ದೀಪಿಕಾ ಜೋಡಿ……….

Spread the love

ಹೈದರಾಬಾದ್: ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಅವರಿಗೆ ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಅವರು ನಾಯಕಿ ಆಗುತ್ತಾರಾ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿತ್ತು. ಇದೀಗ ಈ ವಿಚಾರ ಅಧಿಕೃತವಾಗಿ ಘೋಷಣೆಯಾಗಿದೆ.

ಹೌದು.ಪ್ರಭಾಸ್ ಜೊತೆ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ತೆಲುಗು ಚಲನಚಿತ್ರ ನಿರ್ಮಾಣ ಸಂಸ್ಥೆ ‘ವೈಜಯಂತಿ ಮೂವೀಸ್’ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಪ್ರಭಾಸ್ ಮತ್ತು ದೀಪಿಕಾ ಒಟ್ಟಿಗೆ ಅಭಿನಯಿಸುತ್ತಿರುವ ವಿಚಾರವನ್ನು ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಜೊತೆಗೆ ಒಂದು ವಿಡಿಯೋ ರಿಲೀಸ್ ಮಾಡುವ ಮೂಲಕ ದೀಪಿಕಾ ಪಡುಕೋಣೆ ಅವರನ್ನು ಚಿತ್ರತಂಡ ಸ್ವಾಗತ ಮಾಡಿದೆ.

ಈ ಚಿತ್ರವು ‘ವೈಜಯಂತಿ ಮೂವೀಸ್’ ನ 50ನೇ ವಾರ್ಷಿಕೋತ್ಸವದ ವಿಶೇಷ ಉಡುಗೊರೆಯಾಗಲಿದ್ದು, ಹೆಚ್ಚಿನ ಬಜೆಟ್‍ನ ಬಹುಭಾಷಾ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಮಹಾನಟಿ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಈ ಸಿನಿಮಾವನ್ನು ನಿರ್ದೇಶನದ ಮಾಡುತ್ತಿದ್ದು, ಈ ಚಿತ್ರವನ್ನು ತಾತ್ಕಾಲಿಕವಾಗಿ ‘ಪ್ರಭಾಸ್ 21’ ಎಂದು ಕರೆಯಲಾಗುತ್ತಿದೆ. ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಅವರು ನಟಿಸುತ್ತಿದ್ದಾರೆ.

ಮೊದಲ ಬಾರಿಗೆ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಹೀಗಾಗಿ ಟಾಪ್ ಕಲಾವಿದರಾಗಿರುವ ಇಬ್ಬರ ಕೆಮಿಸ್ಟ್ರಿಯನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ನಟಿಯ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ದೀಪಿಕಾ ಪಡುಕೋಣೆ ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೆ ದೀಪಿಕಾ ಹೆಸರನ್ನು ಟ್ರೆಂಡಿಂಗ್ ಮಾಡುತ್ತಿದ್ದಾರೆಇತ್ತೀಚೆಗಷ್ಟೆ ಅಭಿಮಾನಿಗಳಿಗೆ ಪ್ರಭಾಸ್ ಅಭಿನಯದ 20ನೇ ಸಿನಿಮಾವಾದ ‘ರಾಧೆ ಶ್ಯಾಮ್’ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಸರ್ಪ್ರೈಸ್ ನೀಡಲಾಗಿತ್ತು. ಈಗ ಪ್ರಭಾಸ್ ಅವರ 21ನೇ ಸಿನಿಮಾದಲ್ಲಿ ನಾಯಕಿ ದೀಪಿಕಾ ಪಡುಕೋಣೆ ಎಂಬುದನ್ನು ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಸರ್ಪ್ರೈಸ್ ನೀಡಿದಂತಾಗಿದೆ. ಈ ಹಿಂದೆಯೇ ಈ ವಿಚಾರವಾಗಿ ಚಿತ್ರತಂಡ ದೀಪಿಕಾ ಪಡುಕೋಣೆ ಅವರನ್ನು ಸಂಪರ್ಕ ಮಾಡಿ ಮಾತುಕತೆ ನಡೆಸಿತ್ತು. ಆದರೆ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಇದೀಗ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ


Spread the love

About Laxminews 24x7

Check Also

ರಾಜ್ಯದ ಗ್ರಾಮ ಪಂಚಾಯ್ತಿ ವಾಟರ್ ಮೆನ್, ಪಂಪ್ ಆಪರೇಟರ್, ಮೆಕ್ಯಾನಿಕ್ ಕರ್ತವ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Spread the loveಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಟರ್ ಮೆನ್ ಗಳು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಇಲ್ಲಿದೆ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ