Breaking News

ಮತ್ತೆ ಕುಸಿತ ಕಂಡ ಬಂಗಾರದ ಬೆಲೆ

Spread the love

ನವದೆಹಲಿ : ಚಿನ್ನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗೊಂದು ಶುಭ ಸುದ್ದಿ. ಇಲ್ಲಿಯವರೆಗೆ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ ಈಗ ಕ್ರಮೇಣವಾಗಿ ಕುಸಿಯುತ್ತಿದೆ. ಇದರಿಂದಾಗಿ ಬಂಗಾರ ಕೊಳ್ಳಬೇಕೆಂದುಕೊಂಡಿದ್ದ ಆಭರಣ ಪ್ರಿಯರಿಗೆ ಇದೊಂದು ಸಮಾಧಾನಕರ ಸಂಗತಿ.

ಈ ಹಿಂದೆ ಗರಿಷ್ಠ 56,000 ರೂಗಳನ್ನು ತಲುಪಿದ್ದು, ಪ್ರಸ್ತುತ 10 ಗ್ರಾಂ ಬೆಲೆ ಈಗ 48,000 ರೂ.ಗೆ ಕುಸಿದಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 48,000 ರೂ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 44,000 ರೂ. ಗಳಿಗೆ ಇಳಿದಿದೆ.

ಕಳೆದ ವಾರವೊಂದರಲ್ಲೇ ಚಿನ್ನದ ಬೆಲೆ 1,570 ರೂ.ಗಳ ಕುಸಿತದಿಂದ ಖರೀದಿದಾರರು ಸಂತೋಷ ವ್ಯಕ್ತಪಡಿಸಿದ್ದಾರೆ.
ಪ್ರಮುಖ ನಗರಗಳಲ್ಲಿ ಭಾನುವಾರ ಚಿನ್ನದ ದರ ಈ ಕೆಳಗಿನಂತಿದೆ. ಇದರೊಂದಿಗೆ, ಶಾಪಿಂಗ್ ಮಾಲ್‌ಗಳು, ಆಭರಣ ಅಂಗಡಿಗಳು ಈಗ ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಮತ್ತೊಂದೆಡೆ ಬೆಳ್ಳಿಯ ಬೆಲೆಯೂ ಕುಸಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದುರ್ಬಲಗೊಂಡಿದ್ದರಿಂದ ಭಾರತದಲ್ಲಿ ಬೆಲೆಗಳೂ ಕುಸಿದಿವೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ