ಫೆಬ್ರುವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ ದಾಖಲೆಗಳ ಪ್ರಕಾರ, ಏಪ್ರಿಲ್ನಿಂದ ಪ್ರಾರಂಭವಾಗುವ ಹಣಕಾಸು ರ‍್ಷದಲ್ಲಿ ಸೀಮೆಎಣ್ಣೆಗೆ ಸಬ್ಸಿಡಿ ಪಾವತಿಸಲು ಅವಕಾಶ ನೀಡೋದಿಲ್ಲ ಎಂದಿದೆ. ಅದ್ರಂತೆ, ಮರ‍್ಚ್ 31ಕ್ಕೆ ಮುಕ್ತಾಯವಾಗಲಿರುವ ಪ್ರಸಕ್ತ ಹಣಕಾಸು ರ‍್ಷದಲ್ಲಿ ಸೀಮೆಎಣ್ಣೆ ಸಬ್ಸಿಡಿ 2,677.32 ಕೋಟಿ ರೂಪಾಯಿ ಆಗಿತ್ತು. ಹಿಂದಿನ ಹಣಕಾಸು ರ‍್ಷದಲ್ಲಿ ರೂ4,058 ಕೋಟಿ ಆಗಿತ್ತು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ರ‍್ಕಾರ ಸೀಮೆಎಣ್ಣೆ ದರವನ್ನ ಏರಿಕೆ ಮಾಡಿರೋದ್ರ ಜೊತೆಗೆ ಇದ್ರ ಮೇಲೆ ಸಿಗ್ತಿದ್ದ ಸಬ್ಸಿಡಿಯನ್ನೂ ರದ್ದು ಮಾಡಿದೆ. ಹಾಗಾಗಿ ಸರ‍್ವಜನಿಕ ವಿತರಣೆ ಕೇಂದ್ರದಲ್ಲಿ ಸೀಮೆಎಣ್ಣೆ ಖರೀದಿಸಲು ಮಾರುಕಟ್ಟೆಯ ಬೆಲೆಯನ್ನೇ ಗ್ರಾಹಕರು ತೆರಬೇಕಿದೆ. ಇನ್ನು ಮೇ 2020ರಲ್ಲಿ ಲೀರ‍್ಗೆ 13.96 ರೂ. ಇದ್ದ ಸೀಮೆಎಣ್ಣೆ ಈಗ 30.12ಕ್ಕೇರಿದೆ.
