Breaking News

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ACB ದಾಳಿ!

Spread the love

ಹುಬ್ಬಳ್ಳಿ: ನಗರದ ಅಕ್ಷಯ ಪಾರ್ಕ ಬಳಿಯಿರುವ ರಾಜೀವಗಾಂಧಿನಗರದ ಮನೆಯೊಂದರ ಮೇಲೆ ಬೆಳಿಗಿನ ಜಾವವೇ ಎಸಿಬಿ ದಾಳಿ ನಡೆದಿದ್ದು, ಬೃಹತ್ ಭೇಟೆಯನ್ನ ಅಧಿಕಾರಿಗಳು ಆಡಿದ್ದಾರೆಂದು ಹೇಳಲಾಗುತ್ತಿದೆ.

ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಎನ್ನುವವರ ಮನೆ ಹುಬ್ಬಳ್ಳಿಯಲ್ಲಿದ್ದು ಕೆಲವು ವರ್ಷಗಳ ಹಿಂದೆ, ಇದೇ ದೇವರಾಜ ಶಿಗ್ಗಾಂವ ಧಾರವಾಡದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ನೀರಾವರಿ ಇಲಾಖೆಯಲ್ಲಿದ್ದ ದೇವರಾಜ ಅವರನ್ನ ಧಾರವಾಡದಿಂದ ವರ್ಗಾವಣೆ ಮಾಡಿದ ನಂತರ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಕಳೆದ ಒಂದೂವರೆ ವರ್ಷದ ಹಿಂದೆ ರಾಜೀವನಗರದಲ್ಲಿರುವ ಮನೆ ನಂಬರ್ 158 ಅನ್ನು ಒಂದು ಕೋಟಿ 53 ಲಕ್ಷಕ್ಕೆ ತೆಗೆದುಕೊಂಡಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದ್ದು ಪರಿಶೀಲನೆ ನಡೆಯುತ್ತಿದೆ

ಇಂದು ಮೂರು ವಾಹನಗಳೊಂದಿಗೆ ಆಗಮಿಸಿರುವ ಎಸಿಬಿ ತಂಡ ಮನೆಯ ಪ್ರತಿ ಕಡೆಯೂ ತಪಾಸಣೆ ಮಾಡುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

ಎಸಿಬಿ ದಾಳಿ ಆರಂಭವಾದಾಗಿಂದ ಮನೆಯ ಯಾವುದೇ ಸದಸ್ಯರನ್ನ ಹೊರಗೆ ಬಿಟ್ಟಿಲ್ಲ. ಅಷ್ಟೇ ಅಲ್ಲ, ಹಲವು ದಾಖಲಾತಿಗಳನ್ನ ಕೇಳಿ ಪಡೆಯುವ ಪ್ರಯತ್ನವನ್ನ ಅಧಿಕಾರಿಗಳು ಮಾಡುತ್ತಿದ್ದಾರೆಂದು ಹೇಳಲಾಗಿದೆ.


Spread the love

About Laxminews 24x7

Check Also

ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ.

Spread the love ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ