Breaking News

ಶಿವಲಿಂಗಕ್ಕೆ ಕಣ್ಣು ಬಂದಿದ್ದಾವೆ..?

Spread the love

ಬೆಳಗಾವಿ : ಈ ಹಿಂದೆ ಸಾಯಿ ಬಾಬಾ ಪೋಟೋದಲ್ಲಿ ವಿಭೂತಿ ಉದುರಿದ್ದು, ಗಣೇಶ ಹಾಲು ಕುಡಿದಿದ್ದು ಕೇಳಿರುತ್ತೀರಿ. ಇದೇ ಮಾದರಿಯಲ್ಲೇ ಇಲ್ಲೊಂದು ಕಲ್ಲಿನ ಶಿವಲಿಂಗಕ್ಕೆ ಕಣ್ಣು ಮೂಡಿದೆಯಂತೆ. ಶಿವಲಿಂಗಕ್ಕೆ ಕಣ್ಣು ಬಂದಿದ್ದಾವೆ ಎಂಬ ಮಾತು ನಂಬಿದಂತ ನೂರಾರು ಭಕ್ತರು, ದೇವಾಲಯಕ್ಕೆ ಹರಿದು ಬರುತ್ತಿದ್ದಾರೆ. ಇಂತಹ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನ ಬಣಗಾರ ಗಲ್ಲಿಯಲ್ಲಿ ಶಂಕರಲಿಂಗ ದೇವಾಲಯವಿದೆ. ಇಂತಹ ದೇವಾಲಯದಲ್ಲಿರುವಂತ ಶಿವಲಿಂಗಮೂರ್ತಿಯಲ್ಲಿ ಕಣ್ಣು ಮೂಡಿದೆಯಂತೆ. ಹೀಗೆಂದು ಅರ್ಚಕರು ಹೇಳಿದ್ದು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಿದು, ಆ ವಿಸ್ಮಯ ನೋಡಲು ಶಂಕರ ಲಿಂಗ ದೇವಾಲಯಕ್ಕೆ ಭಕ್ತರ ಜನಸಾಗರವೇ ಹರಿದು ಬರುತ್ತಿದೆ.

ಶಂಕರಲಿಂಗ ದೇವಾಲಯದ ಶಿವಲಿಂಗಕ್ಕೆ ಕಣ್ಣು ಮೂಡಿರೋದು ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತೆ ಎಂದು ಅನೇಕರು ಹೇಳಿದ್ರೇ, ಜನರು ಮಾತ್ರ ಇಂದು ರಾತ್ರಿ ಸಂಕಷ್ಟಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೇ 2004ರಲ್ಲಿಯೂ ಇದೇ ರೀತಿ ಶಿವಲಿಂಗದಲ್ಲಿ ಕಣ್ಣು ಮೂಡಿತ್ತು ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಈಗ ಕಲ್ಲಿನ ಶಿವಲಿಂಗಕ್ಕೆ ಕಣ್ಣು ಮೂಡಿದೆ ಎಂಬ ವದಂತಿ ನಂಬಿ, ನೂರಾರು ಭಕ್ತರು ವೀಕ್ಷಿಸಲು ದೇವಾಲಯಕ್ಕೆ ಆಗಮಿಸ್ತಾ ಇದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ