Breaking News

ʼPNBʼ ಗ್ರಾಹಕರೇ, ನಾಳೆಯಿಂದ ನೀವು ʼATMʼನಿಂದ ಹಣ ತೆಗೆಯೋದು ಕಷ್ಟ?

Spread the love

ಎಟಿಎಂ ಮೂಲಕ ವಂಚನೆ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ತನ್ನ ಎಟಿಎಂಗಳಿಂದ ಹಣ ಡ್ರಾ ಮಾಡಲು ಫೆ.1ರಿಂದ ನಿಯಮವನ್ನ ಬದಲಿಸಲಿದ್ದು, ಪಿಎನ್ ಬಿ ಗ್ರಾಹಕರು ಇಎಂವಿ ಯೇತರ ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.

ಪಿಎನ್ ಬಿ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷ್ಯ ತಿಳಿಸಿದ್ದು, ಬ್ಯಾಂಕಿನ ಎಟಿಎಂ ಬಳಕೆ ನಿಯಮಗಳಲ್ಲಿ ಈ ಬದಲಾವಣೆ ನಿಮಗೆ ಸ್ವಲ್ಪ ಕಷ್ಟವಾಗಬಹುದು. ಆದ್ರೆ, ಕಷ್ಟಪಟ್ಟು ಸಂಪಾದಿಸಿದ ಹಣ ಸುರಕ್ಷಿತವಾಗಿರಲಿದೆ ಎಂದಿದೆ.

ಇಎಂವಿಯೇತರ ಎಟಿಎಂಗಳು ವಹಿವಾಟು ನಡೆಸುವಾಗ ಎಟಿಎಂಗಳು ಅಥವಾ ಡೆಬಿಟ್ ಕಾರ್ಡ್ʼಗಳನ್ನ ಬಳಸುವುದಿಲ್ಲ. ಈ ಯಂತ್ರಗಳಲ್ಲಿಇರುವ ದತ್ತಾಂಶವನ್ನ ಕಾರ್ಡ್ʼನ ಮ್ಯಾಗ್ನೆಟಿಕ್ ಬಾರ್ ಮೂಲಕ ಓದಲಾಗುತ್ತದೆ. ಕೆಲವು ಸೆಕೆಂಡುಗಳ ಕಾಲ ಕಾರ್ಡ್ ಅನ್ನ ಲಾಕ್ ಮಾಡಲಾಗುತ್ತೆ.

PNB ಈ ದೊಡ್ಡ ಬದಲಾವಣೆಗಳನ್ನ ಮಾಡಲಿದೆ..!

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದು, ಏಪ್ರಿಲ್ 1ರಿಂದ ಹಳೆಯ IFSC ಮತ್ತು MICR ಕೋಡ್ʼಗಳನ್ನ ಬ್ಯಾಂಕ್ ಬದಲಾಯಿಸಲಿದೆ ಎಂದಿದೆ. ಗ್ರಾಹಕರ ಪ್ರಸ್ತುತ ಕೋಡ್ʼಗಳು ಮಾರ್ಚ್ 31, 2021 ರಿಂದ ಕೆಲಸ ಮಾಡುವುದಿಲ್ಲ. ನೀವು ನೆಟ್ ಬ್ಯಾಂಕಿಂಗ್ ಅಥವಾ ಆನ್ ಲೈನ್ʼನಲ್ಲಿ ಹಣ ವರ್ಗಾವಣೆ ಮಾಡಬೇಕಿದ್ದರೆ, ನೀವು ಬ್ಯಾಂಕ್ʼನಿಂದ ಹೊಸ ಕೋಡ್ ತೆಗೆದುಕೊಳ್ಳಬೇಕಾಗುತ್ತದೆ. ನೀವು ಹೊಸ ಕೋಡ್ ತೆಗೆದುಕೊಳ್ಳದಿದ್ದರೆ, ನೀವು ಬ್ಯಾಂಕ್ ಮೂಲಕ ವಹಿವಾಟು ನಡೆಸಲು ಕಷ್ಟವಾಗಬಹುದು.

2020ರ ಏಪ್ರಿಲ್ 1ರಂದು ಸರ್ಕಾರ ಪಿಎನ್ ಬಿ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನ ವಿಲೀನವಾಗುತ್ವೆ. ಪಿಎನ್ ಬಿ ವಿಲೀನದ ನಂತರ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ʼನ ಎಲ್ಲಾ ಶಾಖೆಗಳು ಈಗ ಪಿಎನ್ ಬಿಯ ಶಾಖೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕ್ʼನಲ್ಲಿ ಈಗ 11 ಸಾವಿರಕ್ಕೂ ಹೆಚ್ಚು ಶಾಖೆಗಳು ಮತ್ತು 13 ಸಾವಿರಕ್ಕೂ ಹೆಚ್ಚು ಎಟಿಎಂಗಳಿವೆ.


Spread the love

About Laxminews 24x7

Check Also

ಏಕಾಏಕಿ ಫೀಸ್​​ ಹೆಚ್ಚಳ: ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು 

Spread the loveದೇವನಹಳ್ಳಿ, ಏಪ್ರಿಲ್​ 09: ಕರ್ನಾಟಕದಲ್ಲಿ ಈಗಾಗಲೇ ಅಗತ್ಯ ದಿನ ಬಳಕೆಯ ವಸ್ತುಗಳಾದ ಹಾಲು, ಗ್ಯಾಸ್​​, ಪೆಟ್ರೋಲ್​, ಡಿಸೇಲ್​ ಸೇರಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ