ಬೆಂಗಳೂರು : ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದಾಗಿ ದಿನಕ್ಕೊಂದು ಹೇಳಿಕೆ ಕೊಡುತ್ತಿರುವಂತ ಮಹಾರಾಷ್ಟ್ರಕ್ಕೆ, ಛತ್ರಪತಿ ಶಿವಾಜಿ ಪೂರ್ವಜರು ಕರ್ನಾಟಕದವರು ಹಾಗಾಗಿ ಶಿವಾಜಿಯ ಮೂಲಕ ಕರ್ನಾಟಕ. ಮುಂಬೈ ಕರ್ನಾಟಕಕ್ಕೆ ಸೇರಬೇಕು ಎನ್ನುವ ಮೂಲಕ ರಾಜ್ಯದ ತಂಟೆಗೆ ಬಂದಂತ ಮಹಾರಾಷ್ಟ್ರಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಗೋವಿಂದ ಕಾರಜೋಳ ಖಡಕ್ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ವಾದಕ್ಕೆ, ಮುಂಬೈ ಕರ್ನಾಟಕಕ್ಕೆ ಸೇರಬೇಕು ಎಂಬುದಾಗಿ ತಿರುಗೇಟು ನೀಡಿದ್ದಾರೆ.
ಇತ್ತ ಡಿಸಿಎಂ ಗೋವಿಂದ ಕಾರಜೋಳ, ಛತ್ರಪತಿ ಶಿವಾಜಿ ಪೂರ್ವಜರು ಕರ್ನಾಟಕದವರು, ಹೀಗಾಗಿ ಶಿವಾಜಿಯ ಮೂಲಕ ಕರ್ನಾಟಕವೆಂದು ಹೇಳುವ ಮೂಲಕ, ಶಿವಾಜಿ ಆರಾಧಿಸುವಂತ ಮರಾಠಿಗರಿಗೆ ಟಾಂಗ್ ನೀಡಿದ್ದಾರೆ.
Laxmi News 24×7