Breaking News

9ನೇ ತರಗತಿ, ಪ್ರಥಮ ಪಿಯುಸಿ ತರಗತಿ ಆರಂಭಕ್ಕೆ ದಿನಾಂಕ ನಿಗದಿ

Spread the love

ಬೆಂಗಳೂರು: ರಾಜ್ಯದಲ್ಲಿ ಒಂಬತ್ತನೇ ತರಗತಿ ಮತ್ತು ಪ್ರಥಮ ಪಿಯುಸಿ ತರಗತಿಯ ಆಫ್ ಲೈನ್ ಪಾಠಗಳನ್ನು ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಫೆಬ್ರವರಿ ಒಂದರಿಂದ ತರಗತಿಗಳು ಆರಂಭವಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದರು.

ಫೆ.1ರಿಂದ 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಪೂರ್ಣ ಪ್ರಮಾಣದ ತರಗತಿಗಳು ನಡೆಯಲಿದೆ. ಆಫ್ ಲೈನ್/ಆನ್ ಲೈನ್ ಆಯ್ಕೆ‌ ಮುಂದುವರೆಯಲಿದೆ. ಹಾಜರಾತಿ ಕಡ್ಡಾಯವಲ್ಲ. ಆರರಿಂದ ಎಂಟನೇ ತರಗತಿಯ ವರೆಗೆ ವಿದ್ಯಾಗಮ ತರಗತಿಗಳು ಮುಂದುವರಿಯಲಿದೆ ಎಂದರು.

ಮುಂದಿನ ಫೆಬ್ರವರಿಯಲ್ಲಿ ತಾಂತ್ರಿಕ ಸಲಹಾ ಸಮಿತಿ ಇನ್ನೊಮ್ಮೆ ಸಭೆ ಸೇರಿ ಉಳಿದ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದರು.

ವಿಧಾನಸೌಧದಲ್ಲಿ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಎರಡೂ ಇಲಾಖೆ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಉನ್ನತ ಮಟ್ಟದ ಸಭೆ ನಡೆಸಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

ಎಸ್‌ಎಸ್‌ಎಲ್ ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನೂ ಇದೇ ವೇಳೆಗೆ ಬಿಡುಗಡೆ ಮಾಡಲಾಯಿತು. 2020-21ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆ ಜೂ.14ರಿಂದ ಜೂ.25ರವರೆಗೆ ನಡೆಯಲಿದೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ