Breaking News

ಪೊಲೀಸರ ಜೊತೆ ರೈತರ ವಾಗ್ವಾದ

Spread the love

ಮಂಡ್ಯ : ಬೆಂಗಳೂರಿನಲ್ಲಿ ರೈತರ ಟ್ರ್ಯಾಕ್ಟರ್ ಪೆರೇಡ್ ಹಿನ್ನೆಲೆ, ಜಿಲ್ಲೆಯ ರೈತರು ತಮ್ಮ ಟ್ರ್ಯಾಕ್ಟರ್ ಜೊತೆಗೆ ತೆರಳುತ್ತಿದ್ದರು. ಆದ್ರೇ ಹೀಗೆ ತೆರಳುತ್ತಿದ್ದಂತ ಮದ್ದೂರಿನ ಬಳಿ ರೈತರು ಸೇರಿ ಟ್ರ್ಯಾಕ್ಟರ್ ಗಳನ್ನು ಮದ್ದೂರು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಇದರಿಂದಾಗಿ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದವೇ ನಡೆದಿರುವ ಘಟನೆ ನಡೆದಿದೆ.

ಇಂದು ರೈತರ ಟ್ರ್ಯಾಕ್ಟರ್ ಪೆರೇಡ್ ನಲ್ಲಿ ಭಾಗವಹಿಸಲು ಮಂಡ್ಯದಿಂದ ಬೆಂಗಳೂರಿನತ್ತ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದಂತ ರೈತರನ್ನು ಮದ್ದೂರು ಪೊಲೀಸರು, ಮದ್ದೂರಿನ ಶಿವಪುರದ ಬಳಿಯೇ ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ ಸೇರಿದಂತೆ ಈ ಭಾಗದ ರೈತರು ಬೆಂಗಳೂರಿನ‌ ರ‌್ಯಾಲಿಗೆ ತೆರಳದ್ದಂತವರನ್ನು ತಡೆದು ನಿಲ್ಲಿಸಿದ್ದಾರೆ.

ಪೊಲೀಸರ ಕ್ರಮ ಖಂಡಿಸಿ ರೈತರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮೋದಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರೈತರ ಮಾತಿಗೆ ಮಣಿದು ಬರೀ ರೈತರನ್ನು ರ‌್ಯಾಲಿಗೆ ಕಳಿಸಲು ಪೋಲೀಸರ ಅನುಮತಿಯನ್ನು ಕೊನೆಗೂ ನೀಡಿದ್ದಾರೆ.

 

ಇದರಿಂದಾಗಿ ರ‌್ಯಾಲಿಗೆ ತಂದಿದ್ದ ಟ್ರ್ಯಾಕ್ಟರ್ ಗಳನ್ನು ಮದ್ದೂರಿನ‌ ವೆಂಕಟೇಶ್ವರ ಸಮುದಾಯ ಭವನದಲ್ಲಿ ನಿಲ್ಲಿಸಿದ ರೈತರು, ಬೆಂಗಳೂರಿನತ್ತ ರೈತರು ಮಾತ್ರ ಹೊರಡುವಂತಾಯಿತು.


Spread the love

About Laxminews 24x7

Check Also

ಸಾವಿರಕ್ಕಿಂತ ಹೆಚ್ಚು ಸಿಲಿಂಡರ್‌ ನೀಡಲಾಗದು’: ಸಚಿವ ಕೆ.ಎಚ್‌.ಮುನಿಯಪ್ಪ

Spread the loveಬೆಂಗಳೂರು: ಈಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ನಿತ್ಯ ಒಂದು ಸಾವಿರಕ್ಕಿಂತ ಹೆಚ್ಚು ಸಿಲಿಂಡರ್‌ಗಳನ್ನು ಪೂರೈಸಲು ಸಾಧ್ಯವಿಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ