Breaking News

ಭೀಕರ ಅಪಘಾತದಲ್ಲಿ ಬೆಳಗಾವಿಯ ಮಹಿಳಾ ಪಿಎಸ್ ಐ ಲಕ್ಷ್ಮಿ ನಲವಡೆ (ಪವಾರ್) ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

Spread the love

ಬೆಳಗಾವಿ: ಬೆಳಗಾವಿಯ ಸವದತ್ತಿ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಮಹಿಳಾ ಪಿಎಸ್ ಐ ಲಕ್ಷ್ಮಿ ನಲವಡೆ (ಪವಾರ್) ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿ ಇಂದು ಸಂಜೆ ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಅಪಘಾತದ ರಭಸಕ್ಕೆ ಕಾರು ಬಸ್ಸಿನ ಅಡಿಗೆ ಸಿಲುಕಿಕೊಂಡಿತ್ತು. ಕ್ರೇನ್ ಮೂಲಕ ಕಾರನ್ನು ಹೊರತೆಗೆಯಲಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ಕಾರಿನಲ್ಲಿದ್ದವರು ಬೆಳಗಾವಿ ಸಹ್ಯಾದ್ರಿ ನಗರದ, ಮಹಿಳಾ ಪಿಎಸ್ ಐ ಲಕ್ಷ್ಮಿ ನಲವಡೆ (ಪವರ್) ಹಾಗೂ ಮಗ ಪ್ರಸಾದ ಪವಾರ್, ಸೊಸೆ ಅಂಕಿತಾ ಪವಾರ್ ಹಾಗೂ ದೀಪಾ ಶಹಾಪುರಕರ್.

ಮಗನಿಗೆ 4 -5 ದಿನಗಳ ಹಿಂದಷ್ಟೆ ಮದುವೆಯಾಗಿದ್ದು, ಮಗ, ಸೊಸೆ ಇಬ್ಬರೂ ಸಾವಿಗೀಡಾಗಿದ್ದಾರೆ.

ಲಕ್ಷ್ಮಿ ನಲವಡೆ ಮುಂದಿನ ತಿಂಗಳು ನಿವೃತ್ತಿ ಹೊಂದುವವರಿದ್ದರು.

ಕೆ ಎಸ್ ಆರ್ ಟಿಸಿ ಬಸ್ ಬೆಳಗಾವಿಯಿಂದ ಇಳಕಲ್ ಕಡೆಗೆ ಹೊರತಿದ್ದರೆ, ಕಾರು ಯರಗಟ್ಟಿಯಿಂದ ಬೆಳಗಾವಿಗೆ ಹೊರಟಿತ್ತು. ಚಚಡಿ ಕ್ರಾಸ್ ಬಳಿ ಬರುತ್ತಿದ್ದಂತೆ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಮುರುಗೇಶ ನಿರಾಣಿ ಅದೇ ಮಾರ್ಗದಲ್ಲಿ ಹೋಗುವಾಗ ಅಪಘಾತ ನೋಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.


Spread the love

About Laxminews 24x7

Check Also

ಕೆ. ಎಲ್. ಈ ಸಂಸ್ಥೆಯ ಶ್ರೀ ಬಿ. ಏಮ್. ಕಂಕನಾವಾಡಿ ಆಯುರ್ವೇದ ಮಹಾವಿದ್ಯಾಲಯ ಶಹಾಪುರ ಬೆಳಗಾವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ 03ರ ವಿಶೇಷ ಶಿಬಿರವನ್ನು ಮಣ್ಣೂರು ಗ್ರಾಮದಲ್ಲಿ ದಿನಾಂಕ 8 – ಸೆಪ್ಟೆಂಬರ್ 2025 ಸೋಮವಾರದಂದು ಉದ್ಘಾಟಿಸಲಾಯಿತು.

Spread the love ಕೆ. ಎಲ್. ಈ ಸಂಸ್ಥೆಯ ಶ್ರೀ ಬಿ. ಏಮ್. ಕಂಕನಾವಾಡಿ ಆಯುರ್ವೇದ ಮಹಾವಿದ್ಯಾಲಯ ಶಹಾಪುರ ಬೆಳಗಾವಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ