ಮುಂಬೈ: ರೈತ ಪರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಾಕಿದ್ದ ಸಲ್ಮಾನ್ ಖಾನ್ ಈಗ ಅದೇ ಫೋಟೋದಿಂದ ಈಗ ಟ್ರೋಲ್‍ಗೆ ಒಳಗಾಗಿದ್ದಾರೆ.
ಕೊರೊನಾ ಭೀತಿಯಿಂದ ಚಿತ್ರರಂಗದ ಎಲ್ಲ ಚಟುವಟಿಕೆಗಳು ನಿಂತಿದ್ದು, ಸರ್ಕಾರ ಆದೇಶದಂತೆ ಮತ್ತೆ ಆರಂಭಗೊಳ್ಳುತ್ತಿವೆ. ಲಾಕ್‍ಡೌನ್ ವೇಳೆಯಿಂದಲೂ ತಮ್ಮ ತೋಟದ ಮನೆಯಲ್ಲೇ ಕಾಲಕಳೆಯುತ್ತಿರುವ ಸಲ್ಲು ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರೈತರ ಪರವಾಗಿ ಫೋಟೋವೊಂದನ್ನು ಹಾಕಿದ್ದರು. ಈಗ ಇದೇ ಫೋಟೋವನ್ನು ಇಟ್ಟುಕೊಂಡು ನೆಟ್ಟೆಗರು ಸಲ್ಲು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.ಮಂಗಳವಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅವರ ಫೋಟೋ ಹಾಕಿಕೊಂಡಿದ್ದ ಸಲ್ಮಾನ್ ಖಾನ್ ಅವರು, ಎಲ್ಲ ರೈತರನ್ನು ಗೌರವಿಸಿ ಎಂದು ಬರೆದುಕೊಂಡಿದ್ದರು. ಈ ಫೋಟೋದಲ್ಲಿ ಸಲ್ಮಾನ್ ಅವರು, ಹೊಲದಲ್ಲಿ ಕುಳಿತ್ತಿದ್ದಾರೆ. ಜೊತೆಗೆ ಅವರ ಮೈತುಂಬ ಕೆಸರನ್ನು ಬಳಿಯಲಾಗಿದೆ. ಇದನ್ನು ಕಂಡ ನೆಟ್ಟಿಗರು ಯಾವ ರೈತ ಈ ರೀತಿ ಹೊಲದಲ್ಲಿ ಕುಳಿತು ಫೋಟೋಶೂಟ್ ಮಾಡಿಸುತ್ತಾನೆ ಎಂದು ಕಮೆಂಟ್ ಮಾಡುವ ಮೂಲಕ ಸಲ್ಮಾನ್ ಖಾನ್ ಅವರನ್ನು ಕಾಲೆಳೆದಿದ್ದಾರೆ.
ಲಾಕ್‍ಡೌನ್ ಸಮಯದಿಂದಲೂ ಮುಂಬೈನಲ್ಲಿರುವ ತನ್ನ ಪನ್ವೆಲ್ ತೋಟದ ಮನೆಯಲ್ಲಿ ತಂಗಿರುವ ಸಲ್ಲು, ಅಲ್ಲಿ ಕುದುರೆಗೆ ಹುಲ್ಲು ತಿನ್ನಿಸಿ ತಾನು ತಿಂದು ಸುದ್ದಿಯಾಗಿದ್ದರು. ಜೊತೆಗೆ ಅದೇ ತೋಟದ ಮನೆಯಲ್ಲಿ ವಿದೇಶಿ ಗೆಳತಿ ಜೊತೆ ಸಿಕ್ಕಿಬಿದ್ದಿದ್ದರು. ಈ ಹಿಂದೆಯೂ ಕೂಡ ರೈತ ಪರವಾಗಿ ಇನ್‍ಸ್ಟಾ ಪೋಸ್ಟ್ ಹಾಕಿದ್ದ ಸಲ್ಮಾನ್ ಖಾನ್,ನಾವು ತಿನ್ನುವ ಪ್ರತಿಯೊಂದು ಅನ್ನದ ಮೇಲೆ ನಮ್ಮ ಹೆಸರು ಬರೆದಿರುತ್ತದೆ. ಜೈ ಜವಾನ್ ಜೈ ಕಿಸಾನ್ ಎಂದು ಬರೆದುಕೊಂಡಿದ್ದರು. ಜೊತೆಗೆ ಭತ್ತ ನಾಟಿ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.