Breaking News

ರಾಗಿಣಿಗೆ 140 ದಿನಗಳ ಸೆರೆವಾಸದ ಬಳಿಕ ಬಿಡುಗಡೆ ಭಾಗ್ಯ

Spread the love

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ಯಾಂಡಲ್ ವು ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಸೆ.4, 2021ರಂದು ಬಂಧಿಸಿದ್ದರು. ಸೆ.14ರಂದು ರಾಗಿಣಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಹಲವುಬಾರಿ ಹೈಕೋರ್ಟ್ ಗೆ ನಟಿ ರಾಗಿಣಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಜಾಮೀನು ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ರಾಗಿಣಿ ಪರ ವಕೀಲರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಸುಪ್ರೀಂ ಕೋರ್ಟ್ ರಾಗಿಣಿಗೆ ಜಾಮೀನು ಮಂಜೂರು ಮಾಡಿದ್ದು, 140 ದಿನಗಳ ಸೆರೆವಾಸದ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಂತಾಗಿದೆ.


Spread the love

About Laxminews 24x7

Check Also

ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ ನಿರ್ಮಾಣ”

Spread the love“ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ