Breaking News

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೂ ನಾವು ಸುಮ್ಮನೆ ಕೂರಲ್ಲ : ಮಹಾರಾಷ್ಟ್ರ ಸಚಿವ ಏಕ್ ನಾಥ್ ಶಿಂಧೆ ಉದ್ಧಟತನ

Spread the love

ಬೆಂಗಳೂರು : ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ ಬೆನ್ನಲ್ಲೇ ಸಚಿವ ಏಕನಾಥ್ ಶಿಂಧೆ ಮತ್ತೆ ಗಡಿ ವಿವಾದವನ್ನು ಕೆಣಕಿದ್ದಾರೆ.

ಎಂಇಎಸ್ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಉದ್ಧಟತನ ಹೇಳಿಕೆ ನೀಡಿರುವ ಸಚಿವ ಶಿಂಧೆ, ಬೆಳಗಾವಿ ಗಡಿಭಾಗ ಮಹಾರಾಷ್ಟ್ರಕ್ಕೆ ಸೇರುವವರೆಗೂ ನಾವು ಸುಮ್ಮನೆ ಕೂರಲ್ಲ. ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಬೆಳಗಾವಿ ಸೇರಿ ಮರಾಠಿ ಭಾಷಿಕ ಗಡಿ ಪ್ರದೇಶವನ್ನು ಮಹಾರಾಷ್ಟ್ರ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಕರ್ನಾಟಕ ಆಕ್ರಮಿತ ಕೆಲ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.


Spread the love

About Laxminews 24x7

Check Also

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ-48 ರ ಆರು ಪಥಗಳ ಕಾಮಗಾರಿ ಅಂತಿಮ ಹಂತದಲ್ಲಿ; ಪ್ರಯಾಣಿಕರಿಗೆ ಶೀಘ್ರವೇ ಸುಗಮ ಸಂಚಾರಕ್ಕೆ ಮುಕ್ತ: ಸಂಸದ ಈರಣ್ಣ ಕಡಾಡಿ

Spread the loveಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-48 ರ ಪುಣೆ-ಬೆಂಗಳೂರು ವಿಭಾಗದ ಆರು ಪಥಗಳ ಕಾಮಗಾರಿಯು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ