ಷೇತ್ರದ ವಿಕಲಚೇತನರ ವಿಶೇಷ ಕಾಳಜಿಯಡಿ ಹಾಗೂ ಅವರ ಸುಗಮ ಸಂಚಾರ ಮತ್ತು ಇತರ ಸ್ಥಳಗಳಿಗೆ ಸರಾಗವಾಗಿ ಸಾಗಿ ಹೋಗುವ ಹಿತದೃಷ್ಟಿಯಿಂದ ” ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ” ಇಲಾಖೆಯಡಿ 2018-19 ಹಾಗೂ 2019-20 ರ ಸಾಲಿನ ಅರ್ಜಿಗಳನ್ನು ಪರಿಗಣಿಸಿ ಅದರಂತೆ ಬಿಡುಗಡೆಗೊಂಡ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಕ್ಷೇತ್ರದ ಒಟ್ಟು ಹದಿನೈದು ಜನ ಫಲಾನಭವಿಗಳಿಗೆ ಹಸ್ತಾಂತರಿಸಿ ಅವರ ಮುಖದಲ್ಲಿ ಮಂದಹಾಸವನ್ನು ಮೂಡಿಸಿ ತಕ್ಕಮಟ್ಟಿಗೆ ಆಸರೆಯ ಬದುಕನ್ನು ಕಟ್ಟಿಕೊಟ್ಟಿದ್ದೇನೆ.
ವಿಕಲಚೇತನರು ದೇವರ ಮಕ್ಕಳಿದ್ದಂತೆ, ವಿಕಲಚೇತನರಿಗೆ ನಾವೆಲ್ಲರೂ ವಿಶೇಷವಾದ ಪ್ರಾಧ್ಯಾನ್ಯತೆ ನೀಡವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಅವರನ್ನು ಗೌರವಿಸುವುದರೊಂದಿಗೆ ಭಗವಂತನ ಕೃಪಾಶೀರ್ವಾದ ಸದಾಕಾಲವೂ ನಮ್ಮ ಮೇಲಿರುತ್ತದೆ ಎನ್ನುವುದು ಹಿರಿಯರ ಬಯಕೆಯಾಗಿದೆ.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುಖಂಡರು, ಹಿರಿಯರು, ಸಿ ಸಿ ಪಾಟೀಲ ಅಣ್ಣ, ಯುವರಾಜಣ್ಣ ಕದಂ, ಬಾಗಣ್ಣ ನರೋಟಿ, ಬಾಳು ಪಾಟೀಲ, ಚಂದ್ರು ಬೆಳಗಾಂವಕರ್, ನಾರಾಯಣ ಜಾಧವ, ಮಹೇಶ ಸುಗ್ನಣ್ಣವರ, ನಿಲೇಶ್ ಚಂದಗಡ್ಕರ್, ಸಾತೇರಿ ಬೆಳವತ್ಕರ್, ಬಸವರಾಜ ಮ್ಯಾಗೋಟಿ, ಬಸನಗೌಡ ರುದ್ರಗೌಡ ಪಾಟೀಲ, ರಾಮನಗೌಡ ಪಾಟೀಲ, ಮಹೇಶ ಕೋಲಕಾರ, ಉಮೇಶ ಪಾಟೀಲ, ದತ್ತಾ ಪಾಟೀಲ, ವಿಜಯ ಪಾವಸೆ, ಅನಿಲ ಪಾವಸೆ, ದೇವರಾಜ ಕೋಲಕಾರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.