ಗೋಕಾಕ: ಮದುವೆ, ಸಭೆ ಸಮಾರಂಭಗಳಲ್ಲಿ ಅಡುಗೆ ಮಾಡುತ್ತ ಜೀವನೋಪಾಯ ಸಾಗಿಸುತ್ತಿದ್ದ ಅಡುಗೆ ಭಟ್ಟನ ಮಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 98. 16 ಅಂಕಪಡೆದು ಉತ್ತಮ ಸಾಧನೆ ಮಾಡಿ ಗೋಕಾಕ ನಗರದ ಕೀರ್ತಿ ತಂದಿದ್ದಾನೆ.
ಮೂಡಬಿದರಿಯ ಆಳ್ವಾಸ ಕಾಲೇಜಿನಲ್ಲಿ ಓದುತ್ತಿದ್ದ ಗೋಕಾಕದ ಅನಿಲ ರಾಜು ಬನ್ನಿಶೆಟ್ಟಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗಣಿತ, ಬಯೋಲಾಜಿ, ಹಿಂದಿ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಮೂಲಕ 600 ಅಂಕಗಳ ಪೈಕಿ 589 ಮಾರ್ಕ್ಸ್ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.
ಈತ ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್ಎಸ್ ಎಲ್ ಪರೀಕ್ಷೆಯಲ್ಲಿಯೂ 625 ಕ್ಕೆ 617 ಮಾರ್ಕ್ಸ್ ಪಡೆದ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದ, ಎಸ್ಎಸ್ಎಲ್ ಸಿಯಲ್ಲಿ ಈತನ ಸಾಧನೆಯನ್ನು ಗುರುತಿಸಿದ ಮೂಡಬಿದರೆ ಆಳ್ವಾಸ ಕಾಲೇಜು ಆಡಳಿತ ಮಂಡಿಳಿ ಉಚಿತ ಪ್ರವೇಶ ನೀಡಿ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಕಲ್ಪಿಸಿದೆ.