Breaking News

ಮೊದಲ ಬಾರಿಗೆ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಲಿದ್ದಾರೆ.

Spread the love

 ಮೊದಲ ಬಾರಿಗೆ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಲಿದ್ದಾರೆ. ಇಬ್ಬರು ಸ್ಟಾರ್ ನಟರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಕಾರಣ ನಿರೀಕ್ಷೆಗಳು ಹೆಚ್ಚಿಗೆ ಇವೆ.

ಇಂದು ಹೃತಿಕ್ ರೋಷನ್ ಹುಟ್ಟುಹಬ್ಬವಿದ್ದು, ಇದೇ ದಿನ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಹೆಸರು ಘೋಷಣೆ ಮಾಡಲಾಗಿದೆ.

ದೀಪಿಕಾ ಪಡುಕೋಣೆ ಬರ್ತ್‌ಡೇ ಪಾರ್ಟಿಯಲ್ಲಿ ತಾರೆಯರ ಹಿಂಡು

ಹೃತಿಕ್-ದೀಪಿಕಾ ನಟಿಸುತ್ತಿರುವ ಈ ಹೊಸ ಸಿನಿಮಾಕ್ಕೆ ‘ಫೈಟರ್’ ಎಂದು ಹೆಸರಿಡಲಾಗಿದೆ. ಹೃತಿಕ್ ರೋಷನ್ ಅವರ ಹಿಟ್ ಸಿನಿಮಾ ‘ವಾರ್’ ಮತ್ತು ‘ಬ್ಯಾಂಗ್-ಬ್ಯಾಂಗ್’ ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಅವರೇ ಈ ಸಿನಿಮಾವನ್ನು ಸಹ ನಿರ್ದೇಶಿಸಲಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಾಪಕರು ಸಹ ಅವರೇ.

ಸಿನಿಮಾದಲ್ಲಿ ಹೃತಿಕ್ ರೋಷನ್ ಫೈಟರ್ ಜೆಟ್‌ ಪೈಲೆಟ್ ಪಾತ್ರದಲ್ಲಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ ಪಾತ್ರ ಯಾವುದಾಗಿರಲಿದೆ ಎಂದು ಇನ್ನೂ ಬಹಿರಂಗಪಡಿಸಿಲ್ಲ. ನಿರ್ದೇಶಕರಾಗಿದ್ದ ಸಿದ್ಧಾರ್ಥ್ ಆನಂದ್ ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿ ಬದಲಾಗುತ್ತಿದ್ದಾರೆ.

ದೀಪಿಕಾ ಪಡುಕೋಣೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ‘ಸೂಪರ್ ಸ್ಟಾರ್’ ಎಂದು ಕರೆದ ಪ್ರಭಾಸ್

ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಪ್ರಸ್ತುತ ಬೇರೆ-ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವುಗಳ ಚಿತ್ರೀಕರಣದ ಬಳಿಕ ಈ ಸಿನಿಮಾ ಸೆಟ್ಟೇರಲಿದೆ. ಸಿನಿಮಾವು 2022 ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಕಾರದಗಾ ಗ್ರಾಮದ ಅಭಿವೃದ್ಧಿಯೇ ನನ್ನ ಧ್ಯೇಯ

Spread the loveಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲಾಯಿತು.ಇದಕ್ಕೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ