ಕಲಬುರ್ಗಿ ಜಿಲ್ಲೆ): ಚಿತ್ತಾಪುರ ಬಳಿಯ ಇಟಗಿ ಗ್ರಾಮದ ಹೊರವಲಯದಲ್ಲಿ ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಗ್ರಾಮದ ಕರಿಬಸಪ್ಪ ಪಾಟೀಲ ಕೂಗನೂರ ಅವರು (64) ಶನಿವಾರ ಮಧ್ಯಾಹ್ನ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರ ಛಿದ್ರಗೊಂಡಿದೆ. ದೂರದವರೆಗೂ ದೇಹದ ಅಂಗಗಳು ಬಿದ್ದಿವೆ. ಒಂದು ಕಾಲು ಸುಮಾರು 5 ಕಿ.ಮೀ ದೂರದಲ್ಲಿ ಬಿದ್ದಿದೆ.
ಇಟಗಿ ಸಮೀಪದ ರೈಲ್ವೆ ಹಳಿ ಬಳಿಯೇ ವ್ಯಕ್ತಿಯ ಜಮೀನು ಇದ್ದು, ಹಳಿ ದಾಟುವಾಗ ಈ ದುರ್ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ವಾಡಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Laxmi News 24×7