Breaking News

ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ಎಲ್ಲಿ ಹೋಯಿತು, ಒಬ್ಬರಿಗೂ ನಯಾಪೈಸೆ ಸಿಕ್ಕಿಲ್ಲ; ಡಿ.ಕೆ.ಶಿವಕುಮಾರ್ ಪ್ರಶ್ನೆ

Spread the love

ಬೆಂಗಳೂರು; ಕಾಂಗ್ರೆಸ್ ಸಂಸ್ಥಾಪನ ದಿನ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದವು. ಸಂಕಲ್ಪ ಸಮಾವೇಶದ ಉದ್ದೇಶ ಕೂಡ ಅದೇ. ಹೋರಾಟ ರೂಪಿಸಲು ಸಮಾವೇಶ ಮಾಡುತ್ತಿದ್ದೇವೆ.  ಬ್ಲಾಕ್ ಮಟ್ಟದ ಅಧ್ಯಕ್ಷರ ಸಭೆ ಕರೆದಿದ್ದೇವೆ. ಸ್ಥಳೀಯ ಮಟ್ಟದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತೇವೆ. ನಾವೆಲ್ಲ ಕಾರ್ಯಕರ್ತರು. ಇಲ್ಲಿ ಯಾರು ನಾಯಕರಲ್ಲ. ಮೊನ್ನೆ ಮೈಸೂರು ವಿಭಾಗದ ಸಮಾವೇಶ ಮಾಡಿದ್ದೇವೆ. ಇವತ್ತು ಬೆಂಗಳೂರು ವಿಭಾಗದ ಸಭೆ ಮಾಡುತ್ತಿದ್ದೇವೆ. ಸ್ಥಳೀಯ ಮಟ್ಟದ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಕೊರೋನ ಕಾಲದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಟ್ಯಾಕ್ಸ್ ಹೆಚ್ಚು ಮಾಡಿದ್ದಾರೆ. ಮೋದಿ ಘೋಷಣೆ ‌ಮಾಡಿದ ಇಪ್ಪತ್ತು ಸಾವಿರ ಕೋಟಿ‌ ಎಲ್ಲಿ ಹೊಯಿತ್ತು. ಯಾವೊಬ್ಬ ಜನರಿಗೆ ಅದರ ಪ್ರಯೋಜನ ತಲುಪಲಿಲ್ಲ. ಹೀಗಾಗಿ ಸಮಾನ್ಯ ‌ಜನರ ಧ್ವನಿಯಾಗಲು ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದರುಪಕ್ಷ ಸಂಘಟನೆ ದೃಷ್ಟಿಯಿಂದ ಸಭೆ ನಡೆಸುತ್ತಿದ್ದೇವೆ. ಕಾರ್ಯಕರ್ತರ ಧ್ವನಿ ಅಧ್ಯಕ್ಷರಿಗೆ ಮುಟ್ಟಬೇಕು. ಹಿಂದಿನದು ನನಗೆ ಗೊತ್ತಿಲ್ಲ. ಹೊಸ ಪದ್ಧತಿಯನ್ನು ನಾವು ಪ್ರಾರಂಭ ಮಾಡಿದ್ದೇವೆ. ನಾವೆಲ್ಲರೂ ಇಲ್ಲಿ ಕಾರ್ಯಕರ್ತರೇ. ಮೊನ್ನೆ ಮೈಸೂರು ವಿಭಾಗದ ಸಭೆ ನಡೆಸಿದ್ದೇವೆ. ಇಂದು ಬೆಂಗಳೂರು ವಿಭಾಗದ ಸಭೆ ನಡೆಯುತ್ತಿದೆ. ಜ.11ರಂದು ಬೆಳಗಾವಿ ವಿಭಾಗದ ಸಭೆ ಹುಬ್ಬಳ್ಳಿಯಲ್ಲಿ ನಡೆಸುತ್ತೇವೆ. ಜ.18 ರಂದು ಕಲಬುರ್ಗಿ ವಿಭಾಗದ ಸಭೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

ಇವತ್ತು ಜನ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಘೋಷಿಸಿದೆ. ಆದರೆ ಆ ಹಣ ಇನ್ನೂ ಬಂದಿಲ್ಲ. ಕೊರೋನಾ ಹೆಸರಿನಲ್ಲಿ ಕೋಟಿ ಲೂಟಿ ಮಾಡಿದ್ದಾರೆ.  ಇದೆಲ್ಲವನ್ನೂ ಜನರ ಗಮನಕ್ಕೆ ತರಬೇಕು. ನಮ್ಮ ಕಾರ್ಯಕರ್ತರ ಮೂಲಕ ಇದನ್ನು ತರಬೇಕಿದೆ. ಹಾಗಾಗಿಯೇ ನಾವು ಸಭೆಯಲ್ಲಿ‌ಚರ್ಚೆ ನಡೆಸಿದ್ದೇವೆ ಎಂದರು.


Spread the love

About Laxminews 24x7

Check Also

ಆರ್​ಟಿಒ ಅಧಿಕಾರಿಗಳಿಂದ 98 ಆಟೋಗಳು ಜಪ್ತಿ

Spread the loveಬೆಂಗಳೂರು: ನಿಗದಿ ಮಾಡಿದ್ದ ಪ್ರಯಾಣ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿ ಕಾನೂನು ಬಾಹಿರವಾಗಿ ಆಟೋ ಚಾಲನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ