Breaking News

ಯಾರೋ ಖಾಸಗಿ ವ್ಯಕ್ತಿಗಳಿಂದ ಫೈರ್ ಆಗಿದ್ದು, ಬುಲೆಟ್​​ನ್ನು FSLಗೆ ಕಳುಹಿಸಿದ್ದಾರೆ: ಸಚಿವ ಪರಮೇಶ್ವರ್

Spread the love

ತುಮಕೂರು : ಬಳ್ಳಾರಿ ಗಲಾಟೆ ವಿಚಾರವಾಗಿ ಈಗಾಗಲೇ ನಾನು ಅಲ್ಲಿಗೆ ಲಾ ಅಂಡ್ ಆರ್ಡರ್​ ಎಡಿಜಿಪಿ ಅವರನ್ನು ಕಳುಹಿಸಿದ್ದೇನೆ. ಈಗಲೂ ಅವರು ಸ್ಪಾಟ್​ನಲ್ಲಿಯೇ ಇದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಫೈರ್ ಮಾಡಿದ ಬುಲೆಟ್ ಪೊಲೀಸರದ್ದು ಅಲ್ಲ ಅಂತ ತಿಳಿದುಬಂದಿದೆ. ಯಾವುದೇ ಪೊಲೀಸನವರ ಗನ್​ಗಳಿಂದ ಫೈರ್ ಆಗಿಲ್ಲ. ಮೃತನ ದೇಹಕ್ಕೆ ಹೊಕ್ಕ ಬುಲೆಟ್ ಸಂಗ್ರಹ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ‘ಅದು ರೆಗ್ಯುಲರ್​ ಪೊಲೀಸ್ ಬುಲೆಟ್​​ಗೆ ಮ್ಯಾಚ್ ಆಗ್ತಿಲ್ಲ. ಯಾರೋ ಖಾಸಗಿ ವ್ಯಕ್ತಿಗಳಿಂದ ಫೈರ್ ಆಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆ ಬುಲೆಟ್ ಅನ್ನ ಈಗ FSLಗೆ ಕಳುಹಿಸಿದ್ದಾರೆ. ಅಲ್ಲಿದ್ದಂತಹ ಎಲ್ಲಾ ರಿವಾಲ್ವಾರ್ ಅಥವಾ ಗನ್​​ಗಳನ್ನು ಸೀಜ್ ಮಾಡಿದ್ದಾರೆ. ಪರಿಶೀಲನೆ ಬಳಿಕ ಯಾರ ಬುಲೆಟ್ ಎಂದು ಗೊತ್ತಾಗಲಿದೆ. FSL ಎಕ್ಸ್​​ಫರ್ಟ್​ಗಳು ಅದನ್ನು ಪತ್ತೆ ಹಚ್ಚುತ್ತಾರೆ. ಈಗ ಎರಡು ಕಡೆಯಿಂದಲೂ ದೂರು, ಪ್ರತಿದೂರು ಕೊಟ್ಟಿದ್ದಾರೆ’ ಎಂದರು.ಆ ದೂರು ಪಡೆದು ಎರಡು ಕಡೆ ಎಫ್ಐಆರ್ ದಾಖಲಾಗಿವೆ. ನೂರಾರು ಜನರ ಹೆಸರನ್ನು ದೂರಿನಲ್ಲಿ ಕೊಟ್ಟಿದ್ದಾರೆ. ಒಬ್ಬೊಬ್ಬರನ್ನು ತನಿಖೆ ಮಾಡಲಾಗ್ತಿದೆ. ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು ಅಂತ ಸಿಎಂ ಸೂಚನೆ ಕೊಟ್ಟಿದ್ದಾರೆ. ನಾನು ಕೂಡಾ ನಮ್ಮ ಅಧಿಕಾರಿಗಳಿಗೆ ಹೇಳಿದ್ದೇನೆ. ಈ ಮಧ್ಯೆ ರಾಜಕೀಯ ಮುಖಂಡರುಗಳು ಅಲ್ಲಿಗೆ ಹೋಗಿ ಹೇಳಿಕೆಗಳನ್ನು ಕೊಡ್ತಿದ್ದಾರೆ. ನಮಗೆ ರಾಜಕೀಯ ಮುಖಂಡರ ಹೇಳಿಕೆಗಿಂತ ಅಲ್ಲಿ ನಡೆದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಿ ಅದನ್ನು ಹೊರಗೆ ತರುತ್ತೇವೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ