Breaking News

ನೈಋತ್ಯ ರೈಲ್ವೆ ಸರಕು ಸಾಗಾಣೆಯಲ್ಲಿ ದಾಖಲೆ: ಡಿಸೆಂಬರ್​​ನಲ್ಲೇ 839.7 ಕೋಟಿ ರೂ. ಆದಾಯ ಗಳಿಕೆ

Spread the love

ಹುಬ್ಬಳ್ಳಿ: ನೈಋತ್ಯ ರೈಲ್ವೆ (SWR) ಡಿಸೆಂಬರ್ 2025ರಲ್ಲಿ ಸರಕು ಸಾಗಣೆ ಕಾರ್ಯಾಚರಣೆ ಹಾಗೂ ಆದಾಯದಲ್ಲಿಯೂ ಅತ್ಯುತ್ತಮ ಸಾಧನೆ ದಾಖಲಿಸಿದೆ‌.

ಡಿಸೆಂಬರ್​ನಲ್ಲಿ ನೈಋತ್ಯ ರೈಲ್ವೆ ಒಟ್ಟು 5.07 ಮಿಲಿಯನ್ ಟನ್ (MT) ಮೂಲ ಸರಕುಗಳನ್ನು ಲೋಡ್ ಮಾಡಿದ್ದು, ಡಿಸೆಂಬರ್ 2024ರ 4.04 MTಗೆ ಹೋಲಿಸಿದರೆ 1.03 MT (25.4%) ಹೆಚ್ಚಳವಾಗಿದೆ. ಇದು ನೈಋತ್ಯ ರೈಲ್ವೆ ಇತಿಹಾಸದಲ್ಲಿಯೇ ಒಂದೇ ತಿಂಗಳಲ್ಲಿ ಸಾಧಿಸಿದ ಅತ್ಯಧಿಕ ಸರಕು ಸಾಗಣೆ ಆಗಿದ್ದು, ಮಾರ್ಚ್ 2024ರಲ್ಲಿ ದಾಖಲಾಗಿದ್ದ 5.04 MT ಹಿಂದಿನ ದಾಖಲೆಯನ್ನು ಮೀರಿಸಿದೆ.South Western Railway freight transport

ಸರಕು ಪ್ರಕಾರದಲ್ಲಿ, ಕಬ್ಬಿಣದ ಅದಿರು ಲೋಡಿಂಗ್ 2.1 MTಗೆ ಏರಿಕೆಯಾಗಿದ್ದು, 0.58 MT (38.6%) ಬೆಳವಣಿಗೆ ಕಂಡುಬಂದಿದೆ. ಕಲ್ಲಿದ್ದಲು ಲೋಡಿಂಗ್ 1.1 MTಗೆ ಏರಿಕೆಯಾಗಿದ್ದು, 0.18 MT (19.5%) ಹೆಚ್ಚಳ ದಾಖಲಿಸಿದೆ. ಉಕ್ಕು ಲೋಡಿಂಗ್ 0.91 MT ಆಗಿದ್ದು, ಹಿಂದಿನ ವರ್ಷಗಿಂತ 0.12 MT (15.6%) ಹೆಚ್ಚಾಗಿದೆ. ಕಚ್ಚಾ ವಸ್ತು ಸಾಮಗ್ರಿ ಸರಕು ಸಾಗಣೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದು, ಲೋಡಿಂಗ್ 0.15 MTಗೆ ಏರಿಕೆಯಾಗಿ 0.07 MT (97.4%) ಹೆಚ್ಚಳ ದಾಖಲಿಸಿದೆ. ಖನಿಜ ತೈಲ ಲೋಡಿಂಗ್ 0.22 MT ಆಗಿದ್ದು, 0.03 MT (14%) ಹೆಚ್ಚಳದೊಂದಿಗೆ ನೈಋತ್ಯ ರೈಲ್ವೆ ಪ್ರಾರಂಭವಾದ ಬಳಿಕದ ಅತ್ಯಧಿಕ ಮಾಸಿಕ ಲೋಡಿಂಗ್ ಅನ್ನು ಸಾಧಿಸಿದೆ. ಅಲ್ಲದೆ, ರಸಗೊಬ್ಬರ ಲೋಡಿಂಗ್ 0.1 MTಗೆ (15.4%), ಕಂಟೇನರ್ ಲೋಡಿಂಗ್ 0.1 MTಗೆ (3.5%) ಏರಿಕೆಯಾಗಿದೆ.

ಒಟ್ಟಾರೆಯಾಗಿ, 2025–26 ಹಣಕಾಸು ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ, ನೈಋತ್ಯ ರೈಲ್ವೆ 38.36 MT ಮೂಲ ಸರಕುಗಳನ್ನು ಲೋಡ್ ಮಾಡಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 5.98 MT (18.5%) ಹೆಚ್ಚಳವಾಗಿದೆ. ಇದು ನೈಋತ್ಯ ರೈಲ್ವೆ ಇತಿಹಾಸದಲ್ಲಿಯೇ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ಸಾಧಿಸಿದ ಅತ್ಯಧಿಕ ಸರಕು ಸಾಗಣೆ ಆಗಿದ್ದು, 2023–24ರಲ್ಲಿ ದಾಖಲಾಗಿದ್ದ 36.09 MT ಹಿಂದಿನ ದಾಖಲೆಯನ್ನು ಮೀರಿಸಿದೆ.

ಈ ಅವಧಿಯಲ್ಲಿ ಕಬ್ಬಿಣದ ಅದಿರು ಲೋಡಿಂಗ್ 15.40 MTಗೆ ಏರಿಕೆಯಾಗಿದ್ದು (14.1%), ಉಕ್ಕು ಲೋಡಿಂಗ್ 8 MTಗೆ ಏರಿಕೆಯಾಗಿ (40%) ಇದುವರೆಗೆ ಅತ್ಯಧಿಕ ಸಂಚಿತ ಉಕ್ಕಿನ ಲೋಡಿಂಗ್ ದಾಖಲಿಸಿದೆ. ಕಲ್ಲಿದ್ದಲು ಲೋಡಿಂಗ್ 7.44 MTಗೆ ಏರಿಕೆಯಾಗಿದ್ದು (15.2%), ಕಚ್ಚಾ ವಸ್ತು ಸಾಮಗ್ರಿ ಲೋಡಿಂಗ್ 1.85 MTಗೆ ಏರಿಕೆಯಾಗಿ (110.5%) ಅತ್ಯುತ್ತಮ ಸಾಧನೆಯನ್ನು ತೋರಿಸಿದೆ. ರಸಗೊಬ್ಬರ ಲೋಡಿಂಗ್ 0.1 MTಗೆ ಏರಿಕೆಯಾಗಿ (18.3%) ಹಾಗೂ ಕಂಟೇನರ್ ಸರಕು ಸಾಗಣೆ 0.72 MTಗೆ ಏರಿಕೆಯಾಗಿ (23.7%) ಉತ್ತಮ ಬೆಳವಣಿಗೆ ದಾಖಲಿಸಿದೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ