Breaking News

ರಾಮತೀರ್ಥನಗರ ಉದ್ಯಾನಗಳ ಅಭಿವ್ರದ್ಧಿಗೆ ರಹವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ ಅರ್ಪಣೆ

Spread the love

ರಾಮತೀರ್ಥನಗರ ಉದ್ಯಾನಗಳ ಅಭಿವ್ರದ್ಧಿಗೆ ರಹವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ ಅರ್ಪಣೆ
ಬೆಳಗಾವಿ. ೦೨- ಬಹುದಿನಗಳಿಂದ ರಾಮತೀರ್ಥನಗರದಲ್ಲಿಯ ಉದ್ಯಾನಗಳು ಅಭಿವ್ರದ್ಧಿಯಾಗದೇ ಇರುವದರಿಂದ ಹುಳ,ಹೂಪ್ಪಡಿಗಳು, ಹಾವು,ಚೇಳುಗಳು, ನಾಯಿ, ಹಂದಿಗಳ ತಾಣಗಳಾಗಿದ್ದು, ರಹವಾಸಿಗಳು ಭಯ ಭೀತರಾಗಿದ್ದು, ಬಡಾವಣೆಯಲ್ಲಿ ತಿರುಗಾಡದಂತಾಗಿದೆ. ಈ ಕುರಿತು ಅಭಿವ್ರದ್ಧಿಗೆ ತಕ್ಷಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಇಲ್ಲಿಯ ರಹವಾಸಿಗಳು ಬೆಳಗಾವಿ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಈಗಾಗಲೇ ರಾಮತೀರ್ಥನಗರ ಬೂಡಾದಿಂದ ಮಹಾನಗರ ಪಾಲಿಕೆ ಗೆ ಹಸ್ತಾಂತರ ಕಾರ್ಯ ಅಂತಿಮ ಹಂತದಲ್ಲಿದ್ದು, ಪ್ರದೇಶದಲ್ಲಿ ಅಭಿವೃದ್ಧಿಗೆ ಸಂಬಂದಿಸಿದಂತೆ ಬಾಕಿ ಇರುವ ರಸ್ತೆ, ಗಟಾರುಗಳು, ಮತ್ತು ಗಾರ್ಡನಗಳ ಸುಸ್ತಿತಿಗೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಆಸಿಪ್ ಸೇಠ ಸೇರಿದಂತೆ ಬುಡಾ ಮತ್ತು ಕಾರ್ಪೊರೇಷನ ಆಯುಕ್ತರಿಗೆ ಅಭಿವ್ರದ್ಧಿ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಶಾಸಕ ಆಸಿಪ್ ಸೇಠ ಮನವಿ ಸ್ವೀಕರಿಸಿ ರಾಮತೀರ್ಥನಗರ ನನ್ನ ಕ್ಷೇತ್ರ. ಅಲ್ಲಿಯ ಜನತೆಯ ಆಶೋತ್ತರಗಳನ್ನು ಈಡೇರಿಸುವದು ನನ್ನ ಪ್ರಥಮ ಆದ್ಯತೆಯಾಗಿದೆ. ನಾನು ಸದ್ಯ ಅಲ್ಲಿಯ ಅಭಿವ್ರದ್ಧಿ ಸೇರಿದಂತೆ ಕುಂದು ಕೊರತೆಗಳನ್ನು ತಿಳಿಯಲು ಶನಿವಾರ ಬರುವೆ ಎಂದರು.
ಈ ಸಂದರ್ಭದಲ್ಲಿ ಧುರೀಣರಾದ ಮಾಜಿ ಮೇಯರ್ ಎನ್ ಬಿ ನಿರ್ವಾಣಿ, ವೀರನಗೌಡಾ ಈಶ್ವರಪ್ಪಗೋಳ, ಬಾಳಪ್ಪಾ ಸಂಸುದ್ದಿ, ಬಸವರಾಜ ವಾಲಿ , ಮಲ್ಲಿಕಾರ್ಜುನ ಹಿತ್ತಲಮನಿ, ಮಹಾಂತೇಶ ಕುಲ್ಕರ್ಣಿ, ಬಾಹುಬಲಿ
ಹರದಿ, ಎಸ್ ಬಿ ಊರಬಿನಟ್ಟಿ, ಆನಂದ ಕರಕಿ, ಸಿದ್ಲಿಂಗಪ್ಪಾ ಗಾಳಿ, ಸಚ್ಚಿನ ಮಾಳಗಿ, ಎ ಬಿ ದೇಸಾಯಿ, ರಾಘವ ಪತ್ತಾರ, ರೂಪಾ ಪತ್ತಾರ, ವಿದ್ಯಾ ಕರಕಿ, ಆಶಾ ಸಂಸುದ್ದಿ, ಅನುಸೂಯಾ ಬಶೆಟ್ಟಿ ಸೇರಿದಂತೆ ರಾಮತೀರ್ಥ ನಗರದ ಹಿರಿಯರು, ಯುವಕರು ಉಪಸ್ಥಿತರಿದ್ದರು.
ವರದಿ, ಸುರೇಶ ಉರಬಿನಹಟ್ಟಿ

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ