ಪಂಢರಪುರದ ಗೋಪಾಲಪುರದಲ್ಲಿರುವ ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ ನೀಡಿ,ವಿಶೇಷ ಪೂಜೆ ಸಲ್ಲಿಸಿ,ದರ್ಶನ ಪಡೆದು,ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.ಬಳಿಕ ಅವರು ನೀಡಿದ ಸತ್ಕಾರ ಸ್ವೀಕರಿಸಲಾಯಿತು.
ದೇವಾಲಯದ ಸಂಕೀರ್ಣವು ಸಂತ ಜನಾಬಾಯಿಯವರು ಬಳಸಿದ ವಸ್ತುಗಳನ್ನು ಹೊಂದಿರುವ ಕೋಣೆಯನ್ನು ಒಳಗೊಂಡಿದೆ.ಈ ಸ್ಥಳದಲ್ಲಿಯೇ ವಿಠಲನು ಜನಾಬಾಯಿಯವರ ಮನೆಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದನೆಂದು ನಂಬಲಾಗಿದೆ.ಸಂತ ಜನಾಬಾಯಿ 7 ವರ್ಷದವಳಿದ್ದಾಗ,ಆಕೆಯ ಪೋಷಕರು ಪಂಢರಪುರದ ಶ್ರೀ ವಿಠಲ ದೇವಸ್ಥಾನಕ್ಕೆ ಭೇಟಿ ನೀಡಿದರು.ಜನಾಬಾಯಿ ಶ್ರೀ ವಿಠಲನ ದರ್ಶನ ಪಡೆದ ತಕ್ಷಣ, ಅವರು ವಿಠಲನ ಪಾದ ಕಮಲವನ್ನು ಹಿಡಿದುಕೊಂಡು ಮನೆಗೆ ಹಿಂತಿರುಗುವುದಿಲ್ಲ,ಬದಲಾಗಿ ಭಗವಂತನ ಸೇವೆಯಲ್ಲಿ ಪಂಢರಪುರದಲ್ಲಿ ವಾಸಿಸಿದ ಇತಿಹಾಸವಿದೆ.
Laxmi News 24×7