Breaking News

ಪುಟ್ಟ ಗಾತ್ರದ ‘ಕಿಯೊ’ ಪಿಸಿ ಬೆಂಗಳೂರು ಟೆಕ್ ಸಮ್ಮಿಟ್ ಆಕರ್ಷಣೆ: ಇದರ ಬೆಲೆ ಕೇವಲ 18,999 ರೂ.!

Spread the love

ಬೆಂಗಳೂರು: ಅಗ್ಗದ, ಪುಟ್ಟ ಗಾತ್ರದ ಕೃತಕ ಬುದ್ಧಿಮತ್ತೆಯ ಪರ್ಸನಲ್ ಕಂಪ್ಯೂಟರ್ ‘ಕಿಯೊ’ವನ್ನು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಟೆಕ್ ಸಮ್ಮಿಟ್​​ನ ಆಕರ್ಷಣೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದೆ.

ಬೆಂಗಳೂರು ಟೆಕ್ ಸಮ್ಮಿಟ್​​ನಲ್ಲಿ ಕಿಯೊನಿಕ್ಸ್ ಅಭಿವೃದ್ಧಿಪಡಿಸಿರುವ ಕಿಯೊ ಪಿಸಿಯನ್ನು ಅನಾವರಣಗೊಳಿಸಲಾಯಿತು‌. ಈ ಪುಟ್ಟ ಗಾತ್ರದ ಪಿಸಿ ಬೆಲೆ 18,999 ರೂ. ಇರಲಿದೆ. www.koonestinರಲ್ಲಿ ಕೆಇಒ ಖರೀದಿಯ ಮುಂಗಡ ಆರ್ಡರ್ ಮಾಡಬಹುದಾಗಿದೆ. ‘ಕಿಯೊ’ ಕಂಪ್ಯೂಟರನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಕಾಂಪ್ಯಾಕ್ಟ್ ಕೈಗೆಟುಕುವ, ಕೃತಕ ಬುದ್ಧಿಮತ್ತೆಯ ಪರ್ಸನಲ್ ಕಂಪ್ಯೂಟರ್ ಆಗಿದೆ.

ಈ ‘ಕಿಯೊ’ ಪಿಸಿ ಸದ್ಯಕ್ಕೆ 8 ಜಿಬಿ RAM ಹೊಂದಿದೆ. ಆಂತರಿಕ ಸ್ಟೋರೇಜ್ ಸಾಮರ್ಥ್ಯ ಸುಮಾರು 32 ಜಿಬಿ ಇದ್ದು, ಅದನ್ನು 1 ಟಿಬಿ ತನಕ ವಿಸ್ತರಿಸಬಹುದಾಗಿದೆ. ಈ ಪುಟ್ಟ ಕಿಯೊ ಪಿಸಿಯ ಭಾರ ಕೇವಲ 300 ಗ್ರಾಂ. ಬೆಂಗಳೂರು ಟೆಕ್ ಸಮ್ಮಿಟ್​​ನಲ್ಲಿ ಈ ಮಿನಿ ಪಿಸಿ ಕಿಯೊವನ್ನು ಪ್ರದರ್ಶನ ಮಳಿಗೆಯಲ್ಲಿ ಇಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಮಿನಿ ಪಿಸಿಯ ದರವನ್ನು 18,999 ರೂ. ನಿಗದಿಪಡಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕಂಪ್ಯೂಟಿಂಗ್ ಬಳಕೆಯ ಅನುಭವ: ಜ್ಞಾನ ಆಧಾರಿತ (ಕೆ), ಮಿತವ್ಯಯ (ಇ) ಮತ್ತು ಮುಕ್ತ – ಕಂಪ್ಯೂಟಿಂಗ್ (ಓಪನ್ ಸೋರ್ಸ್) -ಕಿಯೊ’ ವಿದ್ಯಾರ್ಥಿ ಸಮುದಾಯದ ಕಲಿಕೆಗೆ ನೆರವಾಗಲಿದೆ. ಲಿನಕ್ಸ್ ಆಧಾರಿತ ಅಪರೇಟಿಂಗ್ ಸಿಸ್ಟಮ್ (ಬಎನ್) ಹೊಂದಿರುವ ಓಪನ್ – ಸೋರ್ಸ್ ಆರ್‌ಐಎಸ್‌ಸಿ-ವಿ ಪ್ರೊಸೆಸರ್‌ನಲ್ಲಿ ನಿರ್ಮಿಸಿರುವ ‘ಕಿಯೊ’ ಕೈಗೆಟುಕುವ ಬೆಲೆಯಲ್ಲಿ ಸಂಪೂರ್ಣ ಕಂಪ್ಯೂಟಿಂಗ್ ಬಳಕೆಯ ಅನುಭವ ನೀಡಲಿದೆ. ಇದು 4ಜಿ ವೈ-ಫೈ, ಈಧರ್ನೆಟ್, ಯುಎಸ್‌ಬಿ – ಎ ಮತ್ತು ಯುಎಸ್‌ಬಿ – ಸಿ ಪೋರ್ಟ್​​ಗಳು, ಹೆಚ್‌ಡಿಎಂಐ ಮತ್ತು ಆಡಿಯೋ ಪ್ಯಾಕ್ ಸೌಲಭ್ಯ ಹೊಂದಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಉತ್ಪಾದಕತೆ ಪರಿಕರಗಳೊಂದಿಗೆ ಸಂಪೂರ್ಣ ಸಜ್ಜಾಗಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ