Breaking News

ಧ್ವನಿ ಪರಿಶೀಲನೆಗೆ ತೆರಳಿದ್ದ ಪೊಲೀಸರಿಗೆ ಚಕ್ಕರ್ ಕೊಟ್ಟ ರಮೇಶ್ ಕತ್ತಿ

Spread the love

ಧ್ವನಿ ಪರಿಶೀಲನೆಗೆ ತೆರಳಿದ್ದ ಪೊಲೀಸರಿಗೆ ಚಕ್ಕರ್ ಕೊಟ್ಟ ರಮೇಶ್ ಕತ್ತಿ
ಬೆಳ್ಳಂ ಬೆಳಗೆ ರಮೇಶ್ ಕತ್ತಿ ಮನೆಗೆ ವಿಚಾರಣೆಗೆ ಆಗಮಿಸಿದ ಪೊಲೀಸರು ರಮೇಶ್ ಕತ್ತಿ ಸಿಗದ ಕಾರಣ ವಿಚಾರಣೆಗೆ ಹಾಜರಾಗುವಂತೆ ಹೇಳಿ ತೆರಳಿದ ಪೊಲೀಸರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶದ ದಿನದಂದು ಬೆಳಗಾವಿಯಲ್ಲಿ ವಾಲ್ಮೀಕಿ ಸಮಾಜದ ಕುರಿತು ಮಾಜಿ ಸಂಸದ ರಮೇಶ್ ಕತ್ತಿ ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಕತ್ತಿ ಮನೆಗೆ ಬೆಳ್ಳಂ ಬೆಳಗೆ ಪೊಲೀಸರು ಭೇಟಿ ನೀಡಿದ್ದಾರೆ.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಇರುವ ಮಾಜಿ ಸಂಸದ ರಮೇಶ್ ಕತ್ತಿ ಅವರ ಮನೆಗೆ ವಿಚಾರಣೆಗೆ ಆಗಮಿಸಿದ ಪೊಲೀಸರು ರಮೇಶ್ ಕತ್ತಿ ಇಲ್ಲದ ಕಾರಣ
ವಾಪಸ ತೆರಳಿದ್ದಾರೆ.
ನಾಗರಿಕ ಹಕ್ಕು ನಿರ್ದೇಶನಾಲಯ ಎಸ್ ಪಿ ರವೀಂದ್ರ ಗಡಾದೆ ನೇತೃತ್ವದಲ್ಲಿ ತಂಡ ವಿಚಾರಣೆ ನಡೆಸಿ. ರಮೇಶ್ ಕತ್ತಿ ಧ್ವನಿ ಪರೀಕ್ಷೆ ಪಡೆಯಲು ಆಗಮಿಸಿದ್ದರು.
ಇಲ್ಲದ ಕಾರಣ ಬರಿಗೈಯಲ್ಲಿ ವಾಪಸ ತೆರಳಿದ್ದಾರೆ.
ಬೆಲ್ಲದ ಬಾಗೇವಾಡಿ ರಮೇಶ್ ಕತ್ತಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಪುತ್ರ ಮನೆಯಲ್ಲಿ ಅವರಿಲ್ಲ ಎಂದು ಮಾಹಿತಿ ನೀಡಿದಾಗ ಪೊಲೀಸರು ವಾಪಸ್ಸು ತೆರಳಿದ್ದಾರೆ ಮತ್ತು ವಿಚಾರಣೆಗೆ ಹಾಜರಾಗುವಂತೆ ಅವರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ತಿಳಿಸಿ ಹೋಗಿದ್ದಾರೆ..

Spread the love

About Laxminews 24x7

Check Also

ಯುಗಾದಿ, ರಂಜಾನ್ – KSRTCಯಿಂದ ಹೆಚ್ಚುವರಿ ಬಸ್ ಸೇವೆ, ವಿಶೇಷ ರಿಯಾಯಿತಿ ಘೋಷಣೆ

Spread the loveಬೆಂಗಳೂರು: ಯಗಾದಿ  ಹಾಗೂ ರಂಜಾನ್  ಹಬ್ಬ ಒಟ್ಟಿಗೆ ಬಂದ ಹಿನ್ನೆಲೆ ಕೆಎಸ್‌ಆರ್‌ಟಿಸಿ  ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ