ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 29,429 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 9,36,181 ಕ್ಕೇರಿದೆ.
ಬರೋಬ್ಬರಿ 582 ಮಂದಿ ಕೊರೊನಾಗೆ ಬಲಿ ಆಗಿದ್ದು, ಒಟ್ಟು ಮೃತರ ಸಂಖ್ಯೆ 24,309ಕ್ಕೇರಿದೆ. ದೇಶದಲ್ಲಿ ಜುಲೈ 1ರಿಂದ ಇಲ್ಲಿಯವರೆಗೂ ಹೆಚ್ಚು ಕಡಿಮೆ ಮೂರು ಲಕ್ಷ ಕೇಸ್ ನಮೂದಾಗಿವೆ. ಆರೂವರೆ ಸಾವಿರ ಮಂದಿ ಹೆಮ್ಮಾರಿಯಿಂದ ಪ್ರಾಣ ಕಳ್ಕೊಂಡಿದ್ದಾರೆ.ನಿನ್ನೆಯವರೆಗೂ 1.20 ಕೋಟಿ ಮಂದಿಗೆ ಕೊರೊನಾ ಟೆಸ್ಟ್ ನಡೆಸಲಾಗಿದೆ. ಸದ್ಯ ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 63.20ಯಷ್ಟಿದೆ. ಸಕ್ರಿಯ ಪ್ರಕರಣಗಳ ಪ್ರಮಾಣಕ್ಕಿಂತ ಚೇತರಿಕೆ ಪ್ರಮಾಣ ಶೇಕಡಾ 1.8ರಷ್ಟು ಹೆಚ್ಚಿದೆ. ಶೇಕಡಾ 50ರಷ್ಟು ಪ್ರಕರಣಗಳು ಮಹಾರಾಷ್ಟ್ರ, ತಮಿಳುನಾಡಿಗೆ ಸಂಬಂಧಪಟ್ಟಿವೆ. ಆದರೂ ಕೇಂದ್ರ ಸರ್ಕಾರ, ದೇಶದಲ್ಲಿ ಸೋಂಕು ಇನ್ನೂ ಸಮುದಾಯಕ್ಕೆ ಹಬ್ಬಿಲ್ಲ ಎಂದೇ ಹೇಳಿದೆ.
Laxmi News 24×7