Breaking News

ಗ್ರಾ.ಪಂ. ಚುನಾವಣೆ ಅಂತ್ಯ: 2ನೇ ಹಂತದಲ್ಲಿ ಶೇ. 80.71 ಮತದಾನ – ಡಿ. 30ಕ್ಕೆ ಫಲಿತಾಂಶ

Spread the love

ಬೆಂಗಳೂರು: ಕೆಲವೊಂದು ಕಡೆ ಗದ್ದಲ, ಮತದಾನ ಬಹಿಷ್ಕಾರಗಳ ಮಧ್ಯೆ ರಾಜ್ಯದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಡಿ. 22ರಂದು ಮೊದಲ ಹಂತದ ಮತದಾನವಾದರೆ ನಿನ್ನೆ ಭಾನುವಾರ 109 ತಾಲೂಕುಗಳಲ್ಲಿ ಎರಡನೇ ಹಂತದ ಮತದಾನ ನಡೆದಿದೆ. ನಿನ್ನೆ ಶೇ. 80.71ರಷ್ಟು ಮತದಾನ ಆಗಿರುವ ಮಾಹಿತಿ ಇದೆ. ಎರಡೂ ಹಂತಗಳಲ್ಲೂ ಶೇ. 80ಕ್ಕಿಂತ ಹೆಚ್ಚು ಮತದಾನವಾದಂತಾಗಿದೆ.

ನಿನ್ನೆ 2ನೇ ಹಂತದಲ್ಲಿ 39,378 ಸದಸ್ಯರ ಆಯ್ಕೆಗೆ 2,709 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ. 90ರ ಆಸುಪಾಸಿನಲ್ಲಿ ಮತದಾನವಾಗಿದೆ.ಡಿ. 22ರಂದು ನಡೆದ ಮೊದಲ ಹಂತದಲ್ಲಿ 117 ತಾಲೂಕುಗಳಲ್ಲಿನ 3,019 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಿತು. ರಾಜ್ಯದಲ್ಲಿ ಒಟ್ಟು 6,004 ಗ್ರಾಮ ಪಂಚಾಯತಿಗಳಿದ್ದು, 92,121 ಸದಸ್ಯರ ಆಯ್ಕೆಗೆ ಅವಕಾಶ ಇದೆ. ಈ ಪೈಕಿ 5,728 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ. ಹಲವು ಗ್ರಾಮ ಪಂಚಾಯತಿಗಳಲ್ಲಿ ಸದಸ್ಯರ ಅವಿರೋಧ ಆಯ್ಕೆ ಕೂಡ ಆಗಿದೆ. ಐದು ಸಾವಿರಕ್ಕೂ ಹೆಚ್ಚು ಸದಸ್ಯರು ಈ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ