Breaking News

ಎಮ್ಮೆಗಳಿಗೂ ಇಲ್ಲಿದೆ ಬ್ಯೂಟಿ ಪಾರ್ಲರ್, ಆಯಿಲ್ ಮಸಾಜ್!, ಉಚಿತ ಸ್ನಾನ, ಹೇರ್ ಕಟ್!

Spread the love

ಹುಕ್ಕೇರಿ; ಮಹಿಳೆಯರು, ಕಾಲೇಜು ಯುವತಿಯವರು ಹಾಗೂ ಸಿನಿಮಾ ನಟ- ನಟಿಯರು ತಮ್ಮ ಸೌಂದರ್ಯವರ್ದನೆಗೋಸ್ಕರ ಬ್ಯೂಟಿ ಪಾರ್ಲರ್​ಗಳ ಮೊರೆ ಹೋಗೋದು ಸಾಮಾನ್ಯ. ಆದರೆ ಇಲ್ಲೊಂದು ಊರಲ್ಲಿ ಎಮ್ಮೆಗಳಿಗಾಗೇ ಒಂದು ವಿಶೇಷ ಬ್ಯೂಟಿ ಪಾರ್ಲರ್ ಶುರುವಾಗಿದೆ. ಅಷ್ಟಕ್ಕೂ ಎಲ್ಲಿದೆ ಆ ಪಾರ್ಲರ್ ಎನದರ ವಿಶೇಷ ಅಂತೀರಾ? ಈ ಸ್ಟೋರಿ ಓದಿ.
ಹೌದು, ಅಧುನಿಕ ಜಗತ್ತಿನಲ್ಲಿ ಸೌಕರ್ಯಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಕಟ್ಟುಮಸ್ತಾದ ದೇಹದ ಜತೆ ಮುಖದ ಸೌಂದರ್ಯ ಅಂದ ಚಂದಕ್ಕೆ ನಮ್ಮ ಗೃಹಣಿಯರೂ ಸೇರಿದಂತೆ ಕಾಲೇಜು ಯುವಕ- ಯುವತಿಯರು ಬ್ಯೂಟಿ ಪಾರ್ಲರ್​ಗಳ ಮೊರೆ ಹೋಗುವುದನ್ನು ನೋಡಿದ್ದೇವೆ. ಆದರೆ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದಲ್ಲಿ ಎಮ್ಮೆಗಳಿಗಾಗಿಯೇ ಒಂದು ಪಾರ್ಲರ್ ಶುರುವಾಗಿದೆ‌. ಎಮ್ಮೆಗಳಿಗೆ ಹೇರ್ ಕಟ್ ಮಾಡಿಸಿ ಅವುಗಳಿಗೆ ಸ್ನಾನವನ್ನೂ ಮಾಡಿಸಿ, ಎಣ್ಣೆ ಮಸಾಜ್ ಮಾಡಲಾಗುತ್ತದೆ. ದಿನವೊಂದಕ್ಕೆ 25 ರಿಂದ 30 ಎಮ್ಮೆಗಳಿಗೆ ಈ ರೀತಿ ಪಾರ್ಲರ್ ಸೇವೆಅಂದಹಾಗೆ ಇದನ್ನೆಲ್ಲ ಮಾಡುತ್ತಿರುವುದು ಸ್ಥಳೀಯ ನಿವಾಸಿ ವಿಜಯ್ ಸೂರ್ಯವಂಶಿ. ನದಿಗಳಲ್ಲಿ ಎಮ್ಮೆಗಳನ್ನು ತೊಳೆಯುವುದರಿಂದ ನದಿ ನೀರು ಕಲುಷಿತವಾಗುತ್ತೆ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತೆ. ಹೀಗಾಗಿ ನಾನು ಸರ್ಕಾರದಿಂದ ಅನುದಾನ ಪಡೆದು ಈ ಪಾರ್ಲರ್ ಓಪನ್ ಮಾಡಿದ್ದೇನೆ. ಸದ್ಯ ನಮ್ಮಲ್ಲಿ ದಿನಕ್ಕೆ 25 ರಿಂದ 30 ಎಮ್ಮೆಗಳು ಬರುತ್ತಿವೆ. ನಾವು ರೈತರಿಂದ ದುಡ್ಡು ಪಡೆಯುವುದಿಲ್ಲ. ಬದಲಾಗಿ ಎಮ್ಮೆಗಳು ಇಲ್ಲಿಗೆ ಬಂದಾಗ ಅವುಗಳು ಹಾಕುವ ಸಗಣಿ ಹಾಗೂ ಮೈ ತೊಳೆದ ನೀರನ್ನು ನಮ್ಮ ಗದ್ದೆಗೆ ಬಳಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ ವಿಜಯ.ಈ ಪಾರ್ಲರ್ ಮಾಡೋಕೆ ಒಂದು ಒಳ್ಳೆಯ ಕಾರಣವಿದೆ‌. ಕೊಲ್ಹಾಪುರ ಜಿಲ್ಲೆಯಲ್ಲಿ ಹರಿಯುವ ಮುಖ್ಯ ನದಿ ಎಂದರೇ ಅದು ಪಂಚಗಂಗಾ ನದಿ. ಈಗಾಗಲೇ ಕೊಲ್ಹಾಪುರದ ಅನೇಕ ಕಾರ್ಖಾನೆಗಳ ತ್ಯಾಜ್ಯ ನದಿಗೆ ಮಿಶ್ರಿತವಾಗಿ ನದಿ ನೀರು ಹಾಳಾಗುತ್ತಿದೆ. ಇದರ ಜತೆಗೆ ಎಮ್ಮೆ ಸಾಕಾಣಿಕೆಗೆ ಎತ್ತಿದ ಕೈಯಾಗಿರುವ ಕೊಲ್ಹಾಪುರ ಹೈನೋದ್ಯಮಿಗಳೂ ಸಹ ಎಮ್ಮೆಗಳನ್ನು ಹೊಳೆಯಲ್ಲಿ ತೊಳೆಯುವುದರಿಂದ ನೀರು ಮತ್ತಷ್ಟು ಕಲುಷಿತ ಆಗಬಾರದು ಅನ್ನೋ ಕಾರಣಕ್ಕೆ ವಿಜಯ್ ಈ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರದಿಂದ 15 ಲಕ್ಷ ಸಹಾಯ ಪಡೆದು ಈ ಕೆಲಸ ಪ್ರಾರಂಭಿಸಿದ್ದಾರೆ. ಈ ಸೇವೆ ಈಗ ಕರ್ನಾಟಕದ ಗಡಿ ಭಾಗದ ರೈತರು ಗಮನ ಸೆಳೆದಿದ್ದು, ಇಂತಹ ವ್ಯವಸ್ಥೆ ನಮ್ಮ ಭಾಗಕ್ಕೂ ಬರಲಿ ಅಂತಿದ್ದಾರೆ ಕನ್ನಡಿಗರು.

Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ