Breaking News

ಐದು ಕಾರುಗಳ ನಡುವೆ ಸರಣಿ ಅಪಘಾತ,. ಎರಡು ಕಾರು ಪಲ್ಟಿ

Spread the love

ಬೆಂಗಳೂರು: ಏರ್​ಪೋರ್ಟ್ ರಸ್ತೆಯ ಬ್ಯಾಟರಾಯನಪುರ ಫ್ಲೈಓವರ್ ಬಳಿ ಐದು ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಎರಡು ಕಾರು ಪಲ್ಟಿಯಾಗಿದ್ದು. ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರರ ಜಾಲಿ ರೈಡ್ ನಿಂದಾಗಿ ಈ ಸರಣಿ ಅಪಘಾತ ಸಂಭವಿಸಿದೆ. ನಂದಿಬೆಟ್ಟಕ್ಕೆ ಜಾಲಿ ರೈಡ್ ಹೋಗುತ್ತಿದ್ದ ಬೈಕ್ ಸವಾರರ ಟೀಂ ವೇಗವಾಗಿ ಬಂದು ಕಾರ್ ಓವರ್ ಟೆಕ್ ಮಾಡಿದ್ದಾರೆ. ಗಾಬರಿಯಾದ ಕಾರ್ ಚಾಲಕ ಎದುರು ರಸ್ತೆಗೆ ನುಗ್ಗಿದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದೇ ವೇಳೆ ಎರಡು ಕಡೆಗಳಲ್ಲಿ ಬರುತ್ತಿದ್ದ ಐದು ಕಾರುಗಳು ಪರಸ್ಪರ ಡಿಕ್ಕಿಯಾಗಿ ಮೂರು ಕಾರುಗಳು ಪಲ್ಟಿಯಾಗಿವೆ.

ಈ ಅಪಘಾತದಲ್ಲಿ ಆರು ಜನ ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏರ್ಪೋರ್ಟ್ ರಸ್ತೆಯಲ್ಲಿ ಮೂರು ಕಾರುಗಳು ರಸ್ತೆಗೆ ಬಿದ್ದ ಪರಿಣಾಮ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಹೆಬ್ಬಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪಘಾತ ವಾಗಿರುವ ಕಾರುಗಳ ತೆರವುಗೊಳಿಸುತ್ತಿದ್ದಾರೆ.


Spread the love

About Laxminews 24x7

Check Also

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಅಲ್ಪಸಂಖ್ಯಾತರಿಗೆ ವಸತಿ ಮೀಸಲಾತಿ ಹೆಚ್ಚಳ: ಸಿಎಂ ಸಮರ್ಥನೆ

Spread the loveಬೆಂಗಳೂರು: “ವಸತಿ ಮೀಸಲಾತಿ ಹೆಚ್ಚಳ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ