Breaking News

ಕೊರೋನಾ ಮತ್ತೆ ಕಂಗೆಡಿಸಿದೆ. ಕಳೆದ 24 ಗಂಟೆಯಲ್ಲಿ 60 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ

Spread the love

ಮುಂಬೈ – ಭಾರಿ ಅಬ್ಬರದ ನಂತರ ತಣ್ಣಗಾಗಿದ್ದ ಕೊರೋನಾ ಮತ್ತೆ ಮಹಾರಾಷ್ಟ್ರವನ್ನು ಕಂಗೆಡಿಸಿದೆ. ಕಳೆದ 24 ಗಂಟೆಯಲ್ಲಿ 60 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ. 2854 ಜನರಿಗೆ ಒಂದೇ ದಿನ ಸೋಂಕು ದೃಢಪಟ್ಟಿದೆ.

ಕೊರೋನಾ ಮತ್ತು ಪ್ರವಾಹದಿಂದಾಗಿ ಮುಂಬೈ ಮಹಾನಗರ ಸೇರಿದಂತೆ ಬಹುತೇಕ ಮಹಾರಾಷ್ಟ್ರ ರಾಜ್ಯ ಕಂಗೆಟ್ಟುಹೋಗಿತ್ತು. ಅದರಿಂದ ಇನ್ನೇನು ಚೆತರಿಕೆ ಕಾಣುತ್ತಿದೆ ಎನ್ನುವ ಹೊತ್ತಿಗೆ ಮತ್ತೆ ಕೋರೋನಾ ಅಬ್ಬರಿಸತೊಡಗಿದೆ.

ಬ್ರಿಟನ್ ನಿಂದ ಆಗಮಿಸಿರುವ 16 ಜನರು ಸೇರಿದಂತೆ 2854 ಜನರಿಗೆ ಇಂದು ಒಂದೇ ದಿನ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟೂ 19,16,236 ಜನರಿಗೆ ಕೊರೋನಾ ಸೋಂಕು ಪತ್ತೆಯಾದಂತಾಗಿದೆ. 58 ಸಾವಿರ ಸಕ್ರೀಯ ಪ್ರಕರಣಗಳಿವೆ.

ಮುಂಬೈ ಮಹಾನಗರವೊಂದರಲ್ಲೇ ಇಂದು ಒಂದೇ ದಿನ 536 ಜನರಿಗೆ ಸೋಂಕು ಪತ್ತೆಯಾಗಿದೆ. ಇಂದು 12 ಜನರು ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೆ ಸೋಂಕು ಹೆಚ್ಚುತ್ತಿರುವುದರಿಂದ ಗಡಿಯ ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಆತಂಕ ಹೆಚ್ಚಿದೆ. ಎರಡೂ ರಾಜ್ಯಗಳ ಮಧ್ಯೆ ವಾಣಿಜ್ಯ ವ್ಯವಹಾರ ಹೆಚ್ಚಿಗಿದೆ. ಬಸ್ ಸಂಚಾರವು ಅತ್ಯಧಿಕವಾಗಿದೆ. ಜನರ ಓಡಾಟ ನಿರಂತರವಾಗಿರುತ್ತದೆ. ಹಾಗಾಗಿ ಗಡಿಯಲ್ಲಿ ಮತ್ತೆ ತಪಾಸಣೆ ಆರಂಭವಾದರೆ ಅಚ್ಛರಿಯಿಲ್ಲ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ